- Advertisement -
- Advertisement -
ಬಂಟ್ವಾಳ, ಎ. 5: ಕೊರೋನ ವೈರಸ್ ಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದಕ ಪೋಸ್ಟ್ ಹಾಕಿರುವ ಆರೋಪದಲ್ಲಿ ತಾಲೂಕಿನ ಮೂವರ ವಿರುದ್ಧ ಸೋಮವಾರ ಬಂಟ್ವಾಳ ನಗರ ಠಾಣೆಗೆ ಪ್ರತ್ಯೇಕ ದೂರು ನೀಡಲಾಗಿದೆ.
ನಂದಾವರ ಮಸೀದಿ ಬಳಿಯ ನಿವಾಸಿ ಸಂತೋಷ್ ಗೌಡ, ನಂದಾವರ ಕೊಪ್ಪಳ ನಿವಾಸಿ ಸಂತೋಷ್ ಕುಮಾರ್ ಮತ್ತು ಬಂಟ್ವಾಳ ತಾಲೂಕಿನ ಪಲ್ಲಮಜಲು ನಿವಾಸಿ ಸುನಿಲ್ ಪೂಜಾರಿ ಎಂಬವರ ಮೇಲೆ ಎಸ್.ಡಿ.ಪಿ.ಐ ಮತ್ತು ಪಿಎಫ್.ಐ ಸಂಘಟನೆ ದೂರು ನೀಡಿದೆ.
ಈ ಮೂವರು ಕೊರೋನ ವೈರಸ್ ಗೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮುಸ್ಲಿಮರು, ಇಸ್ಲಾಂ ಧರ್ಮ, ಮಸೀದಿ ಹಾಗೂ ಮುಸ್ಲಿಮ್ ಧರ್ಮ ಗುರುಗಳನ್ನು ಅವಹೇಳನ ಮಾಡಿದ್ದಾರೆ. ‘ಬ್ಯಾರಿಗಳು ವೈರಸ್ ಹರಡುವವರಾಗಿದ್ದು ಅವರ ಜೊತೆ ವ್ಯಾಪಾರ ನಿಲ್ಲಿಸೋಣ, ಅವರನ್ನು ಕಲ್ಲು ಹೊಡೆದು ಅಥವಾ ಗುಂಡಿಕ್ಕಿ ಕೊಂದು ಬಿಡಿ’ ಮೊದಲಾದ ರೀತಿಯಲ್ಲಿ ಕೋಮು ಪ್ರಚೋದಕ ಬರಹಗಳನ್ನು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
- Advertisement -