- Advertisement -
- Advertisement -
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಿ ಕಮೀಷನರ್ ಆದೇಶ ಹೊರಡಿಸಿದ್ದಾರೆ.
ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋನ್‌ಗಳ ಬಳಕೆ ಹಾರಾಟ ಮತ್ತು ಡ್ರೋಣ್ ಮೂಲಕ ಚಿತ್ರೀಕರಣ ನಡೆಸುವುದನ್ನು ದಿನಾಂಕ 10-05-2025 ರಂದು ಸಂಜೆ 4 ಗಂಟೆಯಿಂದ ದಿನಾಂಕ 14-05-2025 ರಂದು ಸಂಜೆ 4 ಗಂಟೆಯವರೆಗೆ ಸಂಪೂರ್ಣ ನಿಷೇಧಿಸಲಾಗಿದೆ.
ಡ್ರೋನ್‌ಗಳ ಬಳಕೆ, ಹಾರಾಟ, ಡ್ರೋನ್ ಬಳಸಿ ಚಿತ್ರೀಕರಣ ಸೇರಿ ಎಲ್ಲವನ್ನೂ ಸಂಪೂರ್ಣ ನಿಷೇಧ ಮಾಡಲಾಗಿದೆ. ಡ್ರೋನ್ಸ್ ರೂಲ್ಸ್ 2021 ಕಲಂ 24 ರ ಅಡಿಯಲ್ಲಿ ನಿಷೇಧ ಮಾಡಲಾಗಿದೆ. ಮಂಗಳೂರು ನಗರ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣಾಧಿಕಾರಿಯವರು ತಮ್ಮ ತಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಡ್ರೋಣ್‌ಗಳ ಬಳಕೆ/ಹಾರಾಟವಾಗದಂತೆ ಅಗತ್ಯ ಕ್ರಮ ತೆಗೆದುಕೊಳ್ಳಲು ಮತ್ತು ಈ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಆದೇಶಿಸಲಾಗಿದೆ.
- Advertisement -