Wednesday, May 1, 2024
Homeತಾಜಾ ಸುದ್ದಿಮಂಗಳೂರು: ಕೋಮು ಭಾವನೆ ಕೆರಳಿಸಿದ್ರೆ ಪೊಲೀಸ್‌ ಭಾಷೆಯಲ್ಲೇ ಉತ್ತರ: ಕಮಿಷನರ್‌ ಖಡಕ್‌ ವಾರ್ನಿಂಗ್‌

ಮಂಗಳೂರು: ಕೋಮು ಭಾವನೆ ಕೆರಳಿಸಿದ್ರೆ ಪೊಲೀಸ್‌ ಭಾಷೆಯಲ್ಲೇ ಉತ್ತರ: ಕಮಿಷನರ್‌ ಖಡಕ್‌ ವಾರ್ನಿಂಗ್‌

spot_img
- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷಕ್ಕೆ ಒಂದರ ಹಿಂದೊಂದು ಸಾವುಗಳು ಸಂಭವಿಸುತ್ತಿದ್ದು, ಜಿಲ್ಲೆಯಾದ್ಯಂತ ಶಾಂತಿ ಕದಡಿ, ಭಯದ ವಾತಾವರಣ ನಿರ್ಮಾಣವಾಗಿದೆ.

 ಬರೀ ಹತ್ತು ದಿನಗಳಲ್ಲಿ ಕೋಮುದ್ವೇಷಕ್ಕೆ ಮೂರು ಜೀವಗಳು ಬಲಿಯಾಗಿವೆ. ಹೀಗಾಗಿ ಇಡೀ ಕರಾವಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಕೋಮು ಭಾವನೆ ಕೆರಳಿಸುವ ಯಾವುದೇ ಸುದ್ದಿಗಳನ್ನು ಶೇರ್ ಮಾಡಬಾರದು. ಹಾಗೆ ಮಾಡಿದ್ದೇ ಆದರೆ ಅಂತಹ ಕಿಡಿಗೇಡಿಗಳಿಗೆ ಪೊಲೀಸ್ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಎಚ್ಚರಿಸಿದ್ದಾರೆ.  

ಅಲ್ಲದೆ ಜನರು ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡಬಾರದು ಎಂದು ಇದೇ ವೇಳೆ ಖಡಕ್ ಆಗಿ ಸೂಚಿಸಿದ್ದಾರೆ.

- Advertisement -
spot_img

Latest News

error: Content is protected !!