Wednesday, June 24, 2026
Homeಕರಾವಳಿತನ್ನ ಮನೆಯ ಟೆರೇಸ್ ಮೇಲೆ ಗಾಂಜಾ ಗಿಡ ಬೆಳೆದ ಮಂಗಳೂರಿನ ಕಾಲೇಜು ವಿದ್ಯಾರ್ಥಿ ಅಂದರ್

ತನ್ನ ಮನೆಯ ಟೆರೇಸ್ ಮೇಲೆ ಗಾಂಜಾ ಗಿಡ ಬೆಳೆದ ಮಂಗಳೂರಿನ ಕಾಲೇಜು ವಿದ್ಯಾರ್ಥಿ ಅಂದರ್

- Advertisement -
- Advertisement -

ಕಾಸರಗೋಡು: ತನ್ನ ಮನೆಯ ಟೆರೇಸ್ ನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬೇಕೂರು ಕನ್ನಡಿ ಪಾರೆಯ ನಜೀಬ್ ಮೆಹಫೂಜ್ (22) ಬಂಧಿತ ಆರೋಪಿ.

ಖಚಿತ ಮಾಹಿತಿ ಪಡೆದ ಪೊಲೀಸರು ನಜೀಬ್ ಮೆಹಫೂಜ್ ಮನೆಯನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಆತನ ಕೃತ್ಯ ಬಯಲಾಗಿದೆ. ಕಿದೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಈತ ಟೆರೇಸ್ ನಲ್ಲಿ ಗಾಂಜಾ ಗಿಡ ಗಳನ್ನು ಬೆಳೆಸಿದ್ದನು.

20 ಲೀಟರ್ ನೀರಿನ ಬಾಟಲಿಯ ಮೇಲ್ಭಾಗವನ್ನು ಕತ್ತರಿಸಿ ಅದರಲ್ಲಿ ಮಣ್ಣು ತುಂಬಿಸಿ ಗಿಡಗಳನ್ನು ಬೆಳೆಸಲಾಗಿದೆ. ಹೀಗೆ ಮೂರು ಗಿಡಗಳನ್ನು ಪತ್ತೆ ಹಚ್ಚಲಾಗಿದೆ .ಈತ ಸ್ವಂತ ಬಳಕೆ ಅಲ್ಲದೆ ಮಾರಾಟಕ್ಕಾಗಿ ಗಾಂಜಾ ಗಿಡ ಗಳನ್ನು ಬೆಳೆಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.

- Advertisement -

Latest News

error: Content is protected !!