Wednesday, June 24, 2026
Homeಕರಾವಳಿಉಡುಪಿಉಡುಪಿ; ಬಿಕಾಂ ವಿದ್ಯಾರ್ಥಿನಿಯೊಬ್ಬಳು ನಾಪತ್ತೆ

ಉಡುಪಿ; ಬಿಕಾಂ ವಿದ್ಯಾರ್ಥಿನಿಯೊಬ್ಬಳು ನಾಪತ್ತೆ

- Advertisement -
- Advertisement -

ಉಡುಪಿ; ಬಿಕಾಂ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಘಟನೆ ಬೈಂದೂರು ಸಮೀಪ ಶಿರೂರು ಗ್ರಾಮದಲ್ಲಿ ನಡೆದಿದೆ. ಹಬಿಬುನ್ಸಿಸಾ  ಕೆಸರಕೊಡಿ ಅವರ ಮಗಳು ಬೀಬಿ ಕಾಶ್ಪಾ (18) ನಾಪತ್ತೆಯಾದಾಕೆ.

ಈಕೆ ಭಟ್ಕಳದ ಅಂಜುಮನ್‌ ಕಾಲೇಜಿನಲ್ಲಿ 2ನೇ ವರ್ಷದ ಬಿಕಾಂ ವ್ಯಾಸಂಗ ಮಾಡಿಕೊಂಡಿದ್ದವಳು. ದಿನಾಂಕ 30/09/2025 ರಂದು ಸಂಜೆ 07:30 ಗಂಟೆಗೆ ಶಿರೂರು ಗ್ರಾಮದ ಕೇಸರಕೊಡಿಯಲ್ಲಿರುವ ತನ್ನ ಮನೆಯಿಂದ ಯಾರಿಗೂ ಹೇಳದೇ ಹೊರಗೆ ಹೋದವಳು ಈ ತನಕ ಮನೆಗೂ ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ.

ಕಾಣೆಯಾದ ಮಹಿಳೆಯ ಚಹರೆ : ಪ್ರಾಯ: 18 ವರ್ಷ 3 ತಿಂಗಳು ಎತ್ತರ: 5 ಅಡಿ 11 ಇಂಚು ಮೈಬಣ್ಣ: ಗೋದಿ ಮೈಬಣ್ಣ ಮೂಖ: ದುಂಡು ಮೂಖ ಮಾತನಾಡುವ ಭಾಷೆ: ಹಿಂದಿ ಇಂಗ್ಲೀಷ ಕನ್ನಡ ಉರ್ದು ನಾಖುಂಧ ,ಚಹರೆ ಗುರುತು: ಎಡಕಣ್ಣು ಕೆಳಭಾಗದಲ್ಲಿ ಸಣ್ನ ಕಪ್ಪು ಮಚ್ಚೆ ಇರುತ್ತದೆ.ಧರಿಸಿರುವ ಬಟ್ಟೆ: ಗ್ರೀನ್‌ ಕಲರ್‌ ಟಾಪ್‌ ಮತ್ತು ಕಾಫಿ ಬಣ್ಣದ ಪ್ಯಾಂಟ್  ಧರಿಸಿದ್ದಾಳೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!