Friday, June 5, 2026
Homeಕರಾವಳಿಪುತ್ತೂರಿನಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ವಿದ್ಯಾರ್ಥಿ ಸಾವು

ಪುತ್ತೂರಿನಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ವಿದ್ಯಾರ್ಥಿ ಸಾವು

- Advertisement -
- Advertisement -

ಪುತ್ತೂರು : ಕಾಲು ಜಾರಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಸ್ನಾತಕ್ಕೋತ್ತರ ಪದವಿ ವಿದ್ಯಾಥಿಯೋರ್ವಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆ ಎಂಬಲ್ಲಿ ನಡೆದಿದೆ.

ಇಲ್ಲಿನ ಕೂಸಪ್ಪ ಗೌಡ ಎಂಬವರ ಪುತ್ರ ಪವನ್(22) ಮೃತಪಟ್ಟ ವಿದ್ಯಾರ್ಥಿ. ನಿನ್ನೆ ರಾತ್ರಿ ತನ್ನ ನೆರೆ ಮನೆಯಲ್ಲಿ ನಡೆಯುತ್ತಿದ್ದ ನೇಮಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ತೆರಳಿದ್ದ ಪವನ್ ಬೆಳಗ್ಗೆಯಾದರೂ ಹಿಂದಿರುಗಿ ಬಂದಿರಲಿಲ್ಲ. ಆತನ ಮೊಬೈಲ್‍ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿತ್ತು. ಇದರಿಂದಾಗಿ ಮನೆ ಮಂದಿ ಆತನ ಹುಡುಕಾಟ ನಡೆಸಿದಾಗ ಮನೆ ಸಮೀಪದ ದಾರಿಯಲ್ಲಿದ್ದ ಕರೆರೆಯಲ್ಲಿ ಆತನ ಚಪ್ಪಲಿ ತೇಲುತ್ತಿರುವುದು ಕಂಡು ಬಂದಿತ್ತು. ಇದರಿಂದ ಅನುಮಾನಗೊಂಡು ಕರೆಯಲ್ಲಿ ಹುಡುಕಾಟ ನಡೆಸಿದಾದ ಮೃತದೇಹ ಪತ್ತೆಯಾಗಿದೆ. 

ಮೃತರು ತಂದೆ, ತಾಯಿ, ಐವರು ಸಹೋದರಿಯರನ್ನು ಅಗಲಿದ್ದಾರೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!