Saturday, June 6, 2026
Homeಕರಾವಳಿಮಂಗಳೂರುಪುತ್ತೂರು ; ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ಕಾಮಗಾರಿ ವೇಳೆ ತೆಂಗಿನ ಮರ ಬಿದ್ದು ಕಾರ್ಮಿಕನಿಗೆ...

ಪುತ್ತೂರು ; ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪರಿಸರದಲ್ಲಿ ಕಾಮಗಾರಿ ವೇಳೆ ತೆಂಗಿನ ಮರ ಬಿದ್ದು ಕಾರ್ಮಿಕನಿಗೆ ಗಾಯ

- Advertisement -
- Advertisement -

ಪುತ್ತೂರು ; ಕಾಮಗಾರಿ ವೇಳೆ ತೆಂಗಿನ ಮರ ಬಿದ್ದು ಕಾರ್ಮಿಕನಿಗೆ ಗಾಯವಾಗಿರುವ ಘಟನೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಸಮೀಪ ನಡೆದಿದೆ. ದೇವಳದ ನಿತ್ಯ ಕಾರ್ಮಿಕ ರವಿ(35) ಗಾಯಗೊಂಡ ವ್ಯಕ್ತಿ.

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸುತ್ತಮುತ್ತಲಿನ ಪರಿಸರದಲ್ಲಿ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. ಈ ಕೆಲಸಗಳಿಗೆ ದೇವಳದ ನಿತ್ಯ ಸಿಬ್ಬಂದಿಯನ್ನ ಅನಧಿಕೃತವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಇಂದು ಮರ ಕಡಿಯಲು ದೇವಸ್ಥಾನದ ಸಿಬ್ಬಂದಿನ್ನು ಬಳಸಿಕೊಂಡಿದ್ದಾರೆ. ಈ ವೇಳೆ ಈ ಅಪಘಢ ಸಂಭವಿದೆ. ಕಳೆದ ಕಳೆದ ಕೆಲ ದಿನಗಳಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ದೇವಳದ ನಿತ್ಯ ಸಿಬ್ಬಂದಿಯನ್ನು ಇತರೆ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.


ಸದ್ಯ ಗಾಯಗೊಂಡ ರವಿ ಅವರಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Latest News

error: Content is protected !!