Thursday, May 2, 2024
Homeತಾಜಾ ಸುದ್ದಿಬಿಗಿ ಭದ್ರತೆಯಿರುವ ಸಿಎಂ ನಿವಾಸಕ್ಕೆ ನುಗ್ಗಿದ ವ್ಯಕಿ..! Z-ಪ್ಲಸ್ ಭದ್ರತೆಯ ನಡುವೆಯೂ ಭಾರೀ ಚರ್ಚೆಗೆ ಕಾರಣವಾದ...

ಬಿಗಿ ಭದ್ರತೆಯಿರುವ ಸಿಎಂ ನಿವಾಸಕ್ಕೆ ನುಗ್ಗಿದ ವ್ಯಕಿ..! Z-ಪ್ಲಸ್ ಭದ್ರತೆಯ ನಡುವೆಯೂ ಭಾರೀ ಚರ್ಚೆಗೆ ಕಾರಣವಾದ ವ್ಯಕ್ತಿಯ ನುಸುಳುವಿಕೆ

spot_img
- Advertisement -
- Advertisement -

ಕೋಲ್ಕತ್ತಾ: ಬಿಗಿ ಭದ್ರತೆಯಿರುವ ಸಿಎಂ ನಿವಾಸಕ್ಕೆ ವ್ಯಕ್ತಿಯೊಬ್ಬ ನುಗ್ಗಿದರೆ ಹೇಗಿರುತ್ತದೆ? ಇದು ಭದ್ರತಾ ವೈಫಲ್ಯ ಎಂದೇ ಹೇಳಬಹುದು. ಪಶ್ಚಿಮ ಬಂಗಾಳದಲ್ಲಿ ಇದೇ ರೀತಿ ಘಟನೆ ನಡೆದಿದೆ. ದಕ್ಷಿಣ ಕೋಲ್ಕತ್ತಾದ ಕಾಲಿಘಾಟ್ ಪ್ರದೇಶದಲ್ಲಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸಕ್ಕೆ ಭಾನುವಾರ ಮುಂಜಾನೆ ವ್ಯಕ್ತಿಯೊಬ್ಬ ನುಸುಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ಸಿಎಂಗೆ ಭದ್ರತಾ ಭೀತಿ ಹುಟ್ಟುಹಾಕಿದೆ.

ವಿಚಿತ್ರವೆಂದರೆ, ಮುಖ್ಯಮಂತ್ರಿ ಪಡೆಯುವ Z-ಪ್ಲಸ್ ಭದ್ರತೆಯನ್ನು ದಾಟಿದ ವ್ಯಕ್ತಿ ಯಾರ ಗಮನಕ್ಕೂ ಬಾರದಂತೆ ಸಿಎಂ ನಿವಾಸ ಪ್ರವೇಶಿಸಿದ್ದಾನೆ. ಅಷ್ಟೇ ಅಲ್ಲ ರಾತ್ರಿಯಿಡೀ ಅಲ್ಲೇ ಕಳೆದಿದ್ದಾನೆ. ದಿನದ 24 ಗಂಟೆಯೂ ಭಾರಿ ಭದ್ರತೆ ನೀಡಲಾಗುವ ‘ಅತ್ಯಂತ ಸುರಕ್ಷಿತ’ವಾಗಿರುವ ಖಾಸಗಿ ನಿವಾಸವನ್ನು ವ್ಯಕ್ತಿ ಹೇಗೆ ಪ್ರವೇಶಿಸಿದ್ದಾನೆ ಎಂಬುದೇ ಪ್ರಶ್ನೆಯಾಗಿದೆ. 34ಬಿ ಹರೀಶ್ ಚಟರ್ಜಿ ರಸ್ತೆಯಲ್ಲಿರುವ ಬ್ಯಾನರ್ಜಿ ಅವರ ಮನೆಯ ಗೋಡೆಯನ್ನು ಹತ್ತಿದ ವ್ಯಕ್ತಿ ಒಳ ಪ್ರವೇಶಿಸಿದ್ದಾನೆ. ಬೆಳಗಿನ ಜಾವ ಸುಮಾರು 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಖ್ಯಮಂತ್ರಿಯವರ ನಿವಾಸದಲ್ಲೇ ಭದ್ರತಾ ಲೋಪಗಳಾಗಿರುವುದು ಚರ್ಚೆಗೆ ಕಾರಣವಾಗಿದೆ. ಯಾವುದೋ ದುರುದ್ದೇಶದಿಂದಲೇ ವ್ಯಕ್ತಿ ಹೇಗಾದರೂ ಮಾಡಿ ಸಿಎಂ ನಿವಾಸವಿರುವ ಸಂಕೀರ್ಣಕ್ಕೆ ನುಸುಳಿರಬೇಕು ಎಂದು ನಿರ್ಧರಿಸಿ ಈ ರೀತಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಪ್ರವೇಶಿಸಿರುವ ವ್ಯಕ್ತಿ ಮನೆಯೊಳಗೆ ಉಳಿದುಕೊಂಡಿದ್ದಾನೆ. ತಮ್ಮ ಗಮನಕ್ಕೆ ಬಂದ ನಂತರ ಭದ್ರತಾ ಸಿಬ್ಬಂದಿ ಕಾಳಿಘಾಟ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅವರು ವ್ಯಕ್ತಿಯನ್ನು ಬಂಧಿಸಿದ್ದಾರೆ. ವ್ಯಕ್ತಿಯ ನೋಟವನ್ನು ಗಮನಿಸಿದರೆ, ಆತ ಸ್ವಲ್ಪಮಟ್ಟಿಗೆ ಮಾನಸಿಕ ಅಸ್ವಸ್ಥನಂತೆ ತೋರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾವು ವ್ಯಕ್ತಿಯೊಂದಿಗೆ ಮಾತನಾಡಿ ತನಿಖೆ ನಡೆಸುತ್ತಿದ್ದೇವೆ. ಆತ ಇರುವ ಸ್ಥಳವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಯಾರಾದರೂ ಉದ್ದೇಶಪೂರ್ವಕವಾಗಿ ಸಿಎಂ ನಿವಾಸಕ್ಕೆ ಪ್ರವೇಶಿಸಲು ಆತನಿಗೆ ಸೂಚಿಸಿದ್ದಾರೆಯೇ, ಇದರ ಹಿಂದೆ ಯಾರದ್ದಾದರೂ ಕೈವಾಡ ಇದೆಯೇ ಎಂಬುದನ್ನು ಕಂಡುಹಿಡಿಯಲು ನಾವು ಪ್ರಯತ್ನಿಸುತ್ತಿದ್ದೇವೆ. ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಿಎಂ ನಿವಾಸ ಮತ್ತು ಸುತ್ತಮುತ್ತ ಭದ್ರತೆ ಹೆಚ್ಚಿಸಲು ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದ್ದು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

- Advertisement -
spot_img

Latest News

error: Content is protected !!