Wednesday, June 3, 2026
Homeಕರಾವಳಿಮಂಗಳೂರಿನಲ್ಲಿ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಪಿಎಸ್ ಐ ಸೂಸೈಡ್

ಮಂಗಳೂರಿನಲ್ಲಿ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಪಿಎಸ್ ಐ ಸೂಸೈಡ್

- Advertisement -
- Advertisement -

ಮಂಗಳೂರು: ಸರ್ವಿಸ್ ರಿವಾಲ್ವರ್ ನಿಂದ ಗುಂಡು ಹೊಡೆದುಕೊಂಡು ಸಿಐಎಸ್ಎಫ್ ಪಿಎಸ್ ಐ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ನವ ಮಂಗಳೂರು ಬಂದರಿನ ಮುಖ್ಯ ದ್ವಾರದ ಬಳಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಝಾಕೀರ್ ಹುಸೈನ್(58) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಝಾಕೀರ್ ಹುಸೈನ್ ರಾಯಚೂರು ಜಿಲ್ಲೆಯ ಮೂಲದವರಾಗಿದ್ದು, ಎನ್ಎಂಪಿಟಿ ಮುಖ್ಯದ್ವಾರದಲ್ಲಿ ರಾತ್ರಿ ಪಾಳಿಯ ಕರ್ತವ್ಯದಲ್ಲಿದ್ದರು ಎಂದು ಹೇಳಲಾಗಿದೆ.

ಇಂದು ಬೆಳಿಗ್ಗೆ 6.30ಕ್ಕೆ ಕರ್ತವ್ಯ ಮುಗಿಸಿ ಶೌಚಾಲಯಕ್ಕೆ ಹೋಗಿದ್ದ ಪಿಎಸ್ ಐ,ಶೌಚಾಲಯದಲ್ಲೇ ತನ್ನ ಸರ್ವೀಸ್ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕರ್ತವ್ಯದಲ್ಲಿದ್ದ ಪಿಎಸ್ ಐ ಆತ್ಮಹತ್ಯೆಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಿದ್ದು, ಪಣಂಬೂರು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!