Friday, June 27, 2025
Homeಕರಾವಳಿಬಂಟ್ವಾಳ: ವೃದ್ಧ ದಂಪತಿ ಮೇಲೆ ಚರ್ಚ್ ಫಾದರ್ ಹಲ್ಲೆ

ಬಂಟ್ವಾಳ: ವೃದ್ಧ ದಂಪತಿ ಮೇಲೆ ಚರ್ಚ್ ಫಾದರ್ ಹಲ್ಲೆ

spot_img
- Advertisement -
- Advertisement -

ಬಂಟ್ವಾಳ: ವೃದ್ಧ ದಂಪತಿ ಮೇಲೆ ಚರ್ಚ್ ಧರ್ಮಗುರು ಹಲ್ಲೆ ನಡೆಸಿರುವ ಘಟನೆ ಬಂಟ್ವಾಳ ತಾಲೂಕಿನ ಪುಣಚ ಸಮೀಪದ ಎರ್ಮೆತ್ತಡ್ಕ ಎಂಬಲ್ಲಿ ನಡೆದಿದೆ.

ಎರ್ಮೆತಡ್ಕದ ಗ್ರೆಗರಿ ಮೊಂತೆರೋ(79) ಮತ್ತು ಪತ್ನಿ ಫಿಲೋಮಿನಾ(72) ಹಲ್ಲೆಗೊಳಗಾದ ವೃದ್ಧ ದಂಪತಿಯಾಗಿದ್ದು, ಚರ್ಚ್ ಧರ್ಮಗುರು ಫಾ. ನೆಲ್ಸನ್ ಓಲಿವೆರಾ ಕಾಲಿನಿಂದ ಒದೆದು ಹಲ್ಲೆ ನಡೆಸಿದ್ದಾರೆ.

ಮನೆ ಶುದ್ದಗೊಳಿಸುವ ನಿಮಿತ್ತ ಗ್ರೆಗರಿ ಮೊಂತೆರೋ ಮನೆಗೆ ಭೇಟಿ ನೀಡಿದ್ದ ಫಾದರ್, ಚರ್ಚ್ ಗೆ ಯಾವುದೇ ದೇಣಿಗೆ ಮತ್ತು ವಂತಿಗೆ ನೀಡದಿರುವ ಬಗ್ಗೆ ಚರ್ಚೆ ನಡೆದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಹಲ್ಲೆಗೊಳಗಾದ ವೃದ್ಧ ದಂಪತಿ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಹಲ್ಲೆಯ ದೃಶ್ಯ ಸೆರೆಯಾಗಿದ್ದು, ಫೆಬ್ರವರಿ 29 ರಂದು ಘಟನೆ ನಡೆದಿದೆ.ವಿಟ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

- Advertisement -
spot_img

Latest News

error: Content is protected !!