Wednesday, May 15, 2024
Homeಮನರಂಜನೆಚಿರಂಜೀವಿ ಸರ್ಜಾ ಸಾಯುವ 2 ಗಂಟೆ ಮುಂಚೆ ಏನಾಗಿತ್ತು? ಚಿರು ಈ ತಪ್ಪು ಮಾಡದಿದ್ದರೆ ಸಾಯುತ್ತಿರಲಿಲ್ಲ..

ಚಿರಂಜೀವಿ ಸರ್ಜಾ ಸಾಯುವ 2 ಗಂಟೆ ಮುಂಚೆ ಏನಾಗಿತ್ತು? ಚಿರು ಈ ತಪ್ಪು ಮಾಡದಿದ್ದರೆ ಸಾಯುತ್ತಿರಲಿಲ್ಲ..

spot_img
- Advertisement -
- Advertisement -

ಕನ್ನಡ ಚಿತ್ರರಂಗದ ಜನಪ್ರಿಯ ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ.ಕೇವಲ 39 ವರ್ಷದ ಚಿರಂಜೀವಿ ಸರ್ಜಾ ಅವರು ನಿಧನರಾದ ಸುದ್ದಿ ಎಲ್ಲರಿಗೂ ಆಘಾತ ತಂದಿದ್ದು ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ ಎಂಬುದನ್ನು ಊಹೆ ಮಾಡಿಕೊಳ್ಳುವುದು ಕೂಡ ಮನಸ್ಸಿಗೆ ತುಂಬಾ ಕಷ್ಟವಾಗಿದೆ.ನೆನ್ನೆ ಮೊನ್ನೆಯವರೆಗೂ ಎಲ್ಲರೊಂದಿಗೂ ಚೆನ್ನಾಗಿ ಇದ್ದ ಚಿರಂಜೀವಿ ಸರ್ಜಾ ದಿಢೀರ್ ಸಾವನ್ನಪ್ಪಲು ಅಸಲಿ ಕಾರಣ ಬಯಲಾಗಿದೆ.ಸಾಯುವುದಕ್ಕೂ ಕೇವಲ 2 ಗಂಟೆಯ ಮುನ್ನ ಚಿರಂಜೀವಿ ಸರ್ಜಾ ಅವರಿಗೆ ನಿಜಕ್ಕೂ ಏನಾಗಿತ್ತು ಗೊತ್ತಾ…??

ಎಲ್ಲರೊಂದಿಗೆ ನಗುನಗುತ್ತಾ ಯಾರಿಗೂ ನೋವು ಮಾಡದೆ ಬಹಳಷ್ಟು ಆತ್ಮೀಯತೆಯಿಂದ ಇರುತ್ತಿದ್ದ ಚಿರಂಜೀವಿ ಸರ್ಜಾ ಅವರು ಇನ್ನು ನಮ್ಮ ಜೊತೆ ಇರುವುದಿಲ್ಲ ಅನ್ನುವುದು ನಿಜಕ್ಕೂ ದೊಡ್ಡ ಆಘಾತಕಾರಿ ವಿಚಾರವಾಗಿದೆ.ಚಿರು ಸರ್ಜಾ ಅವರ ಸಾವಿನ ಜೊತೆಗೆ ಇನ್ನು ನೋವು ತರಿಸುವ ಮತ್ತೊಂದು ಸಂಗತಿ ಏನಪ್ಪಾ ಅಂದ್ರೆ ಚಿರು ಸರ್ಜಾ ಅವರ ಪತ್ನಿ ಮೇಘನಾ ರಾಜ್ ಅವರು ಗರ್ಭಿಣಿಯಾಗಿದ್ದು ಇನ್ನೇನು ಕೆಲವೇ ತಿಂಗಳಲ್ಲಿ ಮಗುವಿನ ಆಗಮನವಾಗುತ್ತಿತ್ತು ಆದರೆ ಮಗುವಿನ ಮುಖ ನೋಡುವ ಮುನ್ನವೆ ಚಿರಂಜೀವಿ ಸರ್ಜಾ ಅವರು ಸಾವನ್ನಪ್ಪಿರುವುದು ಇನ್ನಷ್ಟು ನೋವನ್ನು ಹೆಚ್ಚು ಮಾಡಿದೆ.

ಎಲ್ಲರೂ ಅಂದುಕೊಂಡಂತೆ ಚಿರಂಜೀವಿ ಸರ್ಜಾ ಅವರಿಗೆ ಧಿಡೀರ್ ಅಂತ ಹಾರ್ಟ್ ಆಟ್ಯಾಕ್ ಆಗಿಲ್ಲ,ಶನಿವಾರ ರಾತ್ರಿ ಸ್ವಲ್ಪ ಎದೆನೋವು ಕಾಣಿಸಿಕೊಂಡಿದೆ ಉಸಿರಾಟದ ತೊಂದರೆ ಬೇರೆ ಬಂದಿದೆ ಅಂದರೆ ಕೊರೊನಾ ಭಯದಿಂದಾಗಿ ಅವರು ಆಸ್ಪತ್ರೆಗೆ ಹೋಗಲಿಲ್ಲ.ಫೋನ್ ಮಾಡಿ ಆಸ್ಪತ್ರೆಯಲ್ಲಿ ಅಪಾಯಿಂಟ್ ಮೆಂಟನ್ನು ಭಾನುವಾರ ಮಧ್ಯಾಹ್ನ 3:30ಕ್ಕೆ. ತೆಗೆದುಕೊಂಡಿದ್ದಾರೆ ಆದರೆ ಭಾನುವಾರ ಬೆಳಿಗ್ಗೆಯಿಂದಲೇ ಎದೆ ನೋವು ಜಾಸ್ತಿಯಾಗಿತ್ತು.

ಎರಡು ಬಾರಿ ಹಾರ್ಟ್ ಅಟ್ಯಾಕ್ ಆಗಿದೆ ಅಂತ ಇದೀಗ ಡಾಕ್ಟರ್ ಗಳು ಹೇಳಿದ್ದು ,3 : 30 ಕ್ಕೆ ಆಸ್ಪತ್ರೆಗೆ ಹೋಗುವಷ್ಟರಲ್ಲಿಯೇ ಅವರಿಗೆ ತುಂಬಾ ಸೀರಿಯಸ್ ಆಗಿತ್ತು.ಆಸ್ಪತ್ರೆಗೆ ಹೋಗುವ ಮೊದಲೇ ಮನೆಯಲ್ಲಿಯೇ ಚಿರು ಸರ್ಜಾ ಅವರು ಕುಸಿದು ಬಿದ್ದಿದ್ದರಂತೆ ಹೀಗಾಗಿ 3 : 30 ಕ್ಕೆ ಆಸ್ಪತ್ರೆಗೆ ಹೋದರೂ ಕೂಡ ಅಷ್ಟರಲ್ಲಿ ಎಲ್ಲ ಮುಗಿದು ಹೋಗಿತ್ತು ಆದರೆ ಏನೂ ಮಾಡಲಾಗಿಲ್ಲ.

ಹೀಗಾಗಿ ಚಿಕಿತ್ಸೆ ಫಲಕಾರಿಯಾಗದೆ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ.ಸ್ವಲ್ಪ ನೋವು ಬಂದಾಗಲೇ ಅಂದರೆ ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಗ್ಗೆಯಾದ್ರೂ ಆಸ್ಪತ್ರೆಗೆ ಹೋಗಿದ್ದರೆ ಬಹುಶಃ ಚಿರಂಜೀವಿ ಸರ್ಜಾ ಅವರು ಇಂದು ನಮ್ಮನ್ನೆಲ್ಲ ಬಿಟ್ಟು ಹೋಗ್ತಾ ಇರಲಿಲ್ಲವೇನೋ ಬದುಕಿರುತ್ತಿದ್ದರೇನೋ..

- Advertisement -
spot_img

Latest News

error: Content is protected !!