Saturday, May 18, 2024
Homeಪ್ರಮುಖ-ಸುದ್ದಿತಾನು ತಿಂದು ಬೇರೆಯವರ ಮುಖಕ್ಕೆ ಒರೆಸಿದ ಚೀನಾ, ಕೊರೊನಾ ಬ್ರೆಜಿಲ್ ನಿಂದ ಬಂತು ಅಂತಾ ಈಗ...

ತಾನು ತಿಂದು ಬೇರೆಯವರ ಮುಖಕ್ಕೆ ಒರೆಸಿದ ಚೀನಾ, ಕೊರೊನಾ ಬ್ರೆಜಿಲ್ ನಿಂದ ಬಂತು ಅಂತಾ ಈಗ ಹೊಸ ಕಥೆ

spot_img
- Advertisement -
- Advertisement -

ಬೀಜಿಂಗ್‌: ಬ್ರೆಜಿಲ್‌ನಿಂದ ಆಮದಾದ ಕೋಳಿಯಲ್ಲಿ ಕೊರೊನಾ ಪತ್ತೆಯಾಗಿದೆ ಎಂದು ಚೀನ ಹೇಳಿದೆ. ಕಳೆದ ವಾರ, ಯಾಂಟೈ ನಗರದ ಈಕ್ವೆಡಾರ್‌ನಿಂದ ಕಳುಹಿಸಲಾದ ಲಾಬ್‌ಸ್ಟರ್‌ ಮೀನುಗಳೂ ಸಹ ಸೋಂಕಿಗೆ ಒಳಗಾಗಿದ್ದವು ಎಂದು ವರದಿಯಾಗಿದೆ.

ಈ ಮೂಲಕ ಚೀನ ತನಗೆ ಅಂಟಿರುವ ಕಳಂಕವನ್ನು ನಿವಾರಿಸಲು ಯುರೋಪಿಯನ್‌ ಸಮುದಾಯದ ಮೇಲೆ ಕೊರೊನಾದ ಮೂಲವನ್ನು ಹೇರಲು ಹೊರಟಿದೆ. ಜೂನ್‌ನಲ್ಲಿ ಚೀನ ಬ್ರೆಜಿಲ್‌ ಸೇರಿದಂತೆ ಇತರ ಕೆಲವು ದೇಶಗಳಿಂದ ಮಾಂಸ ಆಮದನ್ನು ನಿಲ್ಲಿಸಿತ್ತು. ಆದರೆ ಬಳಿಕ ಆಮದು ನಿಷೇಧವನ್ನು ತೆಗೆದುಹಾಕಲಾಯಿತು.

ಬ್ರೆಜಿಲ್‌ನಿಂದ ಕಳುಹಿಸಿದ ಕೋಳಿಯನ್ನು ಸ್ಯಾಂಪಲ್‌ ಮಾಡಲಾಗಿತ್ತು. ಇದರ ವರದಿಯು ಕೊರೊನಾ ಪಾಸಿಟಿವ್‌ ಎಂದು ಬಂದಿದೆ. ಈ ಹಿನ್ನೆಲೆಯಲ್ಲಿ ಸೋಂಕಿತ ಕೋಳಿಯೊಂದಿಗೆ ಸಂಪರ್ಕಕ್ಕೆ ಬಂದ ಕೆಲವು ಜನರು ಮತ್ತು ಇತರ ಉತ್ಪನ್ನಗಳನ್ನು ತನಿಖೆ ಮಾಡಲಾಗಿದೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ. ಆದರೆ ಅವರ ವರದಿ ನೆಗೆಟಿವ್‌ ಬಂದಿತ್ತು.

ಇದೀಗ ಚೀನ ಕೊರೊನಾ ಆರೋಪವನ್ನು ಬ್ರೆಜಿಲ್‌ ಮೇಲೆ ಮಾಡಿದ್ದು ಈ ಬಗ್ಗೆ ಆ ದೇಶ ಯಾವುದೇ ಹೇಳಿಕೆ ನೀಡಿಲ್ಲ. ಈ ಘಟನೆ ಕುರಿತಂತೆ ಜನರಲ್ಲಿ ಎಚ್ಚರಿಕೆಯಿಂದ ಇರುವಂತೆ ಚೀನ ಹೇಳಿದೆ. ಜೂನ್‌ನಲ್ಲಿ ಚೀನದ ರಾಜಧಾನಿ ಬೀಜಿಂಗ್‌ನ ಸೀ ಫ‌ುಡ್‌ ಮಾರುಕಟ್ಟೆಯಲ್ಲಿ ಸೋಂಕಿನ ಪ್ರಕರಣಗಳು ಕಂಡುಬಂದವು. ಅಂದಿನಿಂದ ಸರಕಾರವು ಎಲ್ಲ ಆಹಾರ ಉತ್ಪನ್ನಗಳ ಮಾದರಿಯನ್ನು ತೆಗೆದುಕೊಂಡು ಅದರ ಕೊರೊನಾ ಪರೀಕ್ಷೆ ಮಾಡುತ್ತಿದೆ.

ಕೊರೊನಾ ವೈರಸ್‌ ಚೀನಾದ ವುಹಾನ್‌ ನಗರದಿಂದ ವಿಶ್ವಾದ್ಯಂತ ಹರಡಿದೆ. ಈ ಮಾರುಕಟ್ಟೆಯಲ್ಲಿ ಬಾವಲಿಗಳು ಮತ್ತು ಹಾವುಗಳು ಸೇರಿದಂತೆ ಅನೇಕ ರೀತಿಯ ಪ್ರಾಣಿಗಳ ಮಾಂಸವನ್ನು ಮಾರಾಟ ಮಾಡಲಾಗುತ್ತದೆ. ಇಲ್ಲಿಂದ ಸೋಂಕು ಹರಡಿದೆ ಎಂಬ ವಿವಾದ ಹೆಚ್ಚಾದ ಅನಂತರ ಚೀನ ಅನೇಕ ಪ್ರಾಣಿಗಳ ಖರೀದಿ ಮತ್ತು ಮಾರಾಟವನ್ನು ನಿಷೇಧಿಸಿತ್ತು.

ಈ ನಡುವೆ ತಿಂಗಳ ಹಿಂದೆ ಗುಣಮುಖರಾದ 2 ರೋಗಿಗಳು ಮತ್ತೆ ಸೋಂಕಿಗೆ ಒಳಗಾಗಿದ್ದಾರೆ. ಹುಬೈನಲ್ಲಿ 68 ವರ್ಷದ ಮಹಿಳೆಯೊಬ್ಬರಿಗೆ ಡಿಸೆಂಬರ್‌ನಲ್ಲಿ ಸೋಂಕು ದೃಢಪಟ್ಟಿದೆ. ಎರಡನೆಯ ಪ್ರಕರಣ ಶಾಂಗೈಗೆ ಸಂಬಂಧಿಸಿದೆ. ಎಪ್ರಿಲ್‌ನಲ್ಲಿ ವ್ಯಕ್ತಿಯೊಬ್ಬರು ಇಲ್ಲಿ ಸೋಂಕಿಗೆ ಒಳಗಾಗಿದ್ದರು ಮತ್ತು ಸೋಮವಾರ ಮತ್ತೆ ಧನಾತ್ಮಕ ವರದಿ ಬಂದಿದೆ. ಆದರೆ ಅವರಿಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ.

ಸ್ಥಳೀಯ ಆಡಳಿತದ ಪ್ರಕಾರ ಈ ಇಬ್ಬರು ರೋಗಿಗಳೊಂದಿಗೆ ಸಂಪರ್ಕಕ್ಕೆ ಬಂದ ಜನರಲ್ಲಿ ಯಾರೊಬ್ಬರೂ ಸೋಂಕಿಗೆ ಒಳಗಾಗಿಲ್ಲ. ಕೊರೊನಾದಿಂದ ಚೇತರಿಸಿಕೊಂಡ ಜನರ ದೇಹದಲ್ಲಿ ಉತ್ಪತ್ತಿಯಾದ ಪ್ರತಿಕಾಯಗಳು ಕೆಲವು ಸಂದರ್ಭ ಬೇಗನೇ ಕಡಿಮೆಯಾಗುತ್ತ¤ವೆ ಎಂದು ಈ ಹಿಂದೆ ನಡೆದ ಕೆಲವು ಅಧ್ಯಯನಗಳು ಹೇಳಿಕೊಂಡಿವೆ. ಅಂತಹ ಪ್ರಕರಣಗಳಲ್ಲಿ ಜನರು ಎರಡನೇ ಬಾರಿಗೆ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು.

- Advertisement -
spot_img

Latest News

error: Content is protected !!