Friday, March 29, 2024
Homeತಾಜಾ ಸುದ್ದಿ ಶಿಯೋಮಿ ಕಂಪನಿಯ 5,551,27 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

 ಶಿಯೋಮಿ ಕಂಪನಿಯ 5,551,27 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

spot_img
- Advertisement -
- Advertisement -

ನವದೆಹಲಿ: ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಹಾಗೂ ಕಾನೂನುಬಾಹಿರ ಹಣ ವರ್ಗಾವಣೆಯಲ್ಲಿ ತೊಡಗಿದ ಆರೋಪದಡಿ ಜಾರಿ ನಿರ್ದೇಶನಾಲಯವು (ಇ.ಡಿ) ಚೀನಾ ಮೂಲದ ಶಿಯೋಮಿ ಇಂಡಿಯಾ ಕಂಪನಿಯ ಸುಮಾರು *5,551 ಕೋಟಿ ಹಣವನ್ನು ಜಪ್ತಿ ಮಾಡಿದೆ.


ಶನಿವಾರ ದೆಹಲಿ ಸೇರಿದಂತೆ ಶಿಯೋಮಿ ಕಂಪನಿಯ ವಿವಿಧ ಬ್ಯಾಂಕಿಂಗ್ ವಹಿವಾಟುಗಳನ್ನು ಪರಿಶೀಲನೆ ನಡೆಸಿ ಇ.ಡಿ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಶಿಯೋಮಿ ಭಾರತದಲ್ಲಿ ಮೊಬೈಲ್, ಸ್ಮಾರ್ಟ್ ಫೋನ್ ಸೇರಿದಂತೆ ವಿವಿಧ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಬಿಡಿ ವಸ್ತುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಮುಂಚೂಣಿಯಲ್ಲಿದೆ.


ವಿದೇಶಿ ವಿನಿಯಮ ನಿಯಂತ್ರಣ ಕಾಯ್ದೆ 1999 ಅಡಿ ಈ ಜಪ್ತಿ ಮಾಡಲಾಗಿದೆ ಎಂದು ಇ.ಡಿ ತಿಳಿಸಿದೆ. ಶಿಯೋಮಿ ಜೊತೆ ಸಂಪರ್ಕ ಹೊಂದಿರುವ ವಿದೇಶದ ಮೂರು ಕಂಪನಿಗಳಿಗೆ ಶಿಯೋಮಿ ಇಂಡಿಯಾ ಭಾರೀ ಪ್ರಮಾಣದಲ್ಲಿ ಹಣ ವರ್ಗಾವಣೆ ಮಾಡಿದೆ ಎಂದು ಆರೋಪಿಸಿ ಇ.ಡಿ ಕಳೆದ ಫೆಬ್ರವರಿಯಲ್ಲಿ ವಿಚಾರಣೆ ಆರಂಭಿಸಿತ್ತು.

- Advertisement -
spot_img

Latest News

error: Content is protected !!