Monday, May 20, 2024
Homeಕರಾವಳಿಉಡುಪಿರಾಜ್ಯದ ಹಲವೆಡೆ ಮಕ್ಕಳನ್ನು ಕಾಡ್ತಿದೆ ಟೈಪ್-1 ಮಧುಮೇಹ ಖಾಯಿಲೆ: ಕರಾವಳಿಯ ಮಕ್ಕಳು ಸೇಫ್‌

ರಾಜ್ಯದ ಹಲವೆಡೆ ಮಕ್ಕಳನ್ನು ಕಾಡ್ತಿದೆ ಟೈಪ್-1 ಮಧುಮೇಹ ಖಾಯಿಲೆ: ಕರಾವಳಿಯ ಮಕ್ಕಳು ಸೇಫ್‌

spot_img
- Advertisement -
- Advertisement -

ಉಡುಪಿ: ಟೈಪ್-1 ಮಧುಮೇಹ ಖಾಯಿಲೆಯಿಂದ ಬಳಲುತ್ತಿರುವ ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ ಅಗ್ರಸ್ಥಾನ ಪಡೆದು ಕೊಂಡಿದೆ. 0-18 ವರ್ಷದೊಳಗಿನ ಒಂದು ಲಕ್ಷ ಮಕ್ಕಳಲ್ಲಿ ಸರಾಸರಿ 18 ಮಕ್ಕಳು ಟೈಪ್ -1 ಡಯಾಬಿಟಿಸ್‌ನಿಂದ ಬಾಧಿತರಾಗಿರುವುದು ಆತಂಕ ಮೂಡಿಸಿದೆ. ರಾಜ್ಯಾದ್ಯಂತ ಇತರ ಖಾಸಗಿ ಆಸ್ಪತ್ರೆಗಳಲ್ಲಿ ಸರಿಸುಮಾರು 6,366 ಮಕ್ಕಳ ಸಹಿತ 10,000 ಮಕ್ಕಳು ಈ ಖಾಯಿಲೆಯಿಂದ ಬಳಲುತ್ತಿದ್ದಾರೆ.

ರಾಜ್ಯ ಸರಕಾರ ರಾಷ್ಟ್ರೀಯ ಆರೋಗ್ಯ ಅಭಿಯಾನದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿಯಲ್ಲಿ ಅಂಗನ ವಾಡಿ, ಸರಕಾರಿ ಹಾಗೂ ಖಾಸಗಿ ಶಾಲೆ, ಕಾಲೇಜುಗಳ 18 ವರ್ಷದೊಳಗಿನ 78.32 ಲಕ್ಷ ಮಕ್ಕಳನ್ನು ಮಕ್ಕಳನ್ನು ಟೈಪ್ -1 ಡಯಾಬಿಟಿಸ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 1,884 ಮಕ್ಕಳು ಡಯಾಬಿಟಿಸ್‌ನಿಂದ ಬಳಲುತ್ತಿದ್ದರು.

ರಾಜ್ಯದ ಒಟ್ಟು ಟೈಪ್ -1 ಡಯಾಬಿಟಿಸ್ ಪ್ರಕರಣಗಳಲ್ಲಿ ಶೇ. 75ರಷ್ಟು ಕೇವಲ ರಾಯಚೂರು ಜಿಲ್ಲೆಯಲ್ಲಿ ಪತ್ತೆಯಾಗಿವೆ. ರಾಯಚೂರು 1,448, ದಾವಣಗೆರೆ 87, ಬಳ್ಳಾರಿ 46, ಬೆಳಗಾವಿ 33, ಚಿಕ್ಕಮಗಳೂರು 30, ಕಲಬುರಗಿ 23, ಬಾಗಲಕೋಟೆಯಲ್ಲಿ 20 ಪ್ರಕರಣ ವರದಿಯಾಗಿದೆ. ಉಳಿದಂತೆ ಯಾದಗಿರಿ, ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಮಾತ್ರ ಪರೀಕ್ಷೆಗೆ ಒಳಪಡಿಸಲಾದ ಮಕ್ಕಳಲ್ಲಿ ಪತ್ತೆಯಾಗಿಲ್ಲ.

ಆರೋಗ್ಯ ಇಲಾಖೆ ತಾಲೂಕು ಮಟ್ಟದಲ್ಲಿ ಈ ಖಾಯಿಲೆಯನ್ನು ಪತ್ತೆಹಚ್ಚಲು ಲ್ಯಾಬ್ ವ್ಯವಸ್ಥೆ ಕಲ್ಪಿಸಿದೆ. ಈಗಾಗಲೇ ಡಯಾಬಿಟಿಸ್ ವರದಿಯಾದ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -
spot_img

Latest News

error: Content is protected !!