Thursday, June 4, 2026
Homeಕರಾವಳಿಕಾಸರಗೋಡುಆಟವಾಡುವಾಗ ಸ್ಟೀಲ್ ಪಾತ್ರೆಯೊಳಗೆ ಸಿಲುಕಿ ಹಾಕಿಕೊಂಡ ಮಗುವಿನ ತಲೆ : ಅಗ್ನಿಶಾಮಕದಳದವರ ಸಹಕಾರದಿಂದ ಮಗುವಿನ ರಕ್ಷಣೆ

ಆಟವಾಡುವಾಗ ಸ್ಟೀಲ್ ಪಾತ್ರೆಯೊಳಗೆ ಸಿಲುಕಿ ಹಾಕಿಕೊಂಡ ಮಗುವಿನ ತಲೆ : ಅಗ್ನಿಶಾಮಕದಳದವರ ಸಹಕಾರದಿಂದ ಮಗುವಿನ ರಕ್ಷಣೆ

- Advertisement -
- Advertisement -

ಕೇರಳ: ಮಗುವೊಂದು ಆಟವಾಡುತ್ತಿದ್ದ ವೇಳೆ ಸ್ಟೀಲ್ ಪಾತ್ರೆಯೊಳಗೆ ತಲೆ ಸಿಲುಕಿ ಹೊರತೆಗೆಯಲು ಆಗದೇ ಬಳಿಕ  ಅಗ್ನಿಶಾಮಕ ದಳದವರ ಸಹಕಾರದಿಂದ ಮಗುವನ್ನು ರಕ್ಷಿಸಿದ ಘಟನೆ ಕಾಞಂಗಾಡು ತೈಕಡಪ್ಪುರದಲ್ಲಿ ನಡೆದಿದೆ.

ಇಲ್ಲಿನ  ನಿವಾಸಿ ನಫೀಸಾ ಎಂಬವರ ಒಂದೂವರೆ ವರ್ಷದ ಮಗು ಸ್ಟೀಲ್ ಪಾತ್ರೆ ಹಿಡಿದುಕೊಂಡು ಆಟವಾಡುತ್ತಿದ್ದ ವೇಳೆ ಪಾತ್ರೆಯೊಳಗೆ ತನ್ನ ತಲೆಯನ್ನು ತುರುಕಿಸಿಕೊಂಡಿದೆ. ನಂತರ ಮನೆಯವರು ಮಗುವಿನ ತಲೆಯನ್ನು ಹೊರತೆಗೆಯಲು ಎಷ್ಟೇ ಪ್ರಯತ್ನಪಟ್ಟರೂ ಹೊರತೆಗೆಯಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರು ಬಂದು ಮಗುವನ್ನು ಅಗ್ನಿಶಾಮಕ ದಳದ ಕಛೇರಿಗೆ ಕೊಂಡೊಯ್ದು, ಅಲ್ಲಿ ಯಂತ್ರದ ಸಹಾಯದಿಂದ ಪಾತ್ರೆಯನ್ನು ತುಂಡರಿಸಿ ಮಗುವನ್ನು ರಕ್ಷಿಸಿದ್ದಾರೆ

- Advertisement -

Latest News

error: Content is protected !!