Saturday, June 6, 2026
Homeತಾಜಾ ಸುದ್ದಿಪುತ್ತೂರಿನಲ್ಲಿ ಗೇರು ಬೀಜ ಗಂಟಲಲ್ಲಿ ಸಿಕ್ಕಿ ಮೂರು ವರ್ಷದ ಮಗು ಸಾವು

ಪುತ್ತೂರಿನಲ್ಲಿ ಗೇರು ಬೀಜ ಗಂಟಲಲ್ಲಿ ಸಿಕ್ಕಿ ಮೂರು ವರ್ಷದ ಮಗು ಸಾವು

- Advertisement -
- Advertisement -

ಪುತ್ತೂರು : ಗೇರು ಬೀಜ ತಿನ್ನುವಾಗ ಗಂಟಲಲ್ಲಿ ಸಿಲುಕಿ ಮೂರು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಪುತ್ತೂರು ನಗರದ ಹೊರವಲಯದ ಸಾಲ್ಮರ ಊರಮಾಲ್ ಎಂಬಲ್ಲಿ ನಡೆದಿದೆ.

ಸಾಲ್ಮರ ನಿವಾಸಿ ಇಸಾಕ್ ಎಂಬವರ ಮೂರು ವರ್ಷದ ಮಗು ಮನೆಯಲ್ಲಿ ಗೇರು ಬೀಜ ತಿನ್ನುತ್ತಿದ್ದ ವೇಳೆ ಆಕಸ್ಮಿಕವಾಗಿ ಗಂಟಲಲ್ಲಿ ಸಿಲುಕಿ ಉಸಿರಾಟಕ್ಕೆ ತೊಂದರೆಯಾಗಿ ಅಸ್ವಸ್ತಗೊಂಡಿದೆ. ಕೂಡಲೇ  ಬಾಲಕನನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದು  ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ವೇಳೆಗಾಗಲೇ ಬಾಲಕ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.

- Advertisement -

Latest News

error: Content is protected !!