ಬೆಳ್ತಂಗಡಿ: ಚಿಕ್ಕಮಂಗಳೂರಿನ ವಕೀಲ ಶ್ರೀ ಪ್ರೀತಂ ಎಂಬವರನ್ನು ದಿನಾಂಕ, 30-11-2023ರಂದು ಚಿಕ್ಕಮಗಳೂರು ಪೋಲೀಸರು, ಕ್ಷುಲ್ಲಕ ಕಾರಣಕ್ಕೆ ಹಲ್ಲೆ ನಡೆಸಿ, ನಂತರ ಠಾಣೆಗೆ ಕರೆದೊಯ್ದು ಠಾಣೆಯಲ್ಲಿ ಅಕ್ರಮ ಬಂಧನದಲ್ಲಿರಿಸಿ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಬಗ್ಗೆ ಕಠಿಣ ಕ್ರಮ ಕೈ ಕೈಗೊಳ್ಳುವಂತೆ ಬೆಳ್ತಂಗಡಿ ವಕೀಲರ ಸಂಘ ಮಾನ್ಯ ಮುಖ್ಯಮಂತ್ರಿಗಳನ್ನು ಮನವಿ ಪತ್ರದ ಮೂಲಕ ಆಗ್ರಹಿಸಿದೆ.
ನ್ಯಾಯಾಂಗದ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿರುವ ವಕೀಲ ಸಮುದಾಯದ ಮೇಲೆ ಈ ರೀತಿಯ ಹಲ್ಲೆ ಮತ್ತು ದೌರ್ಜನ್ಯವನ್ನು ನಮ್ಮ ಬೆಳ್ತಂಗಡಿ ವಕೀಲರ ಸಂಘ ಅತ್ಯಂತ ತೀವ್ರವಾಗಿ ಖಂಡಿಸುತ್ತದೆ.
ಈ ಅಮಾನುಷ ಮತ್ತು ಕಾನೂನುಬಾಹಿರ ಕೃತ್ಯದಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಪೋಲೀಸರನ್ನು ಬಂಧಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿಯೂ ಹಾಗೂ ಮುಂದೆಂದಿಗೂ ಇಂತಹ ಕೆಟ್ಟ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕಾಗಿಯೂ ಈ ಮೂಲಕ ಆಗ್ರಹಿಸುತ್ತೇವೆ. ಹಾಗೂ ಇದಕ್ಕೆ ತಪ್ಪಿದ್ದಲ್ಲಿ ಮುಂದಕ್ಕೆ ಕಠಿಣ ಹೋರಾಟ ನಮಗೆ ಅನಿವಾರ್ಯವಾಗುತ್ತದೆ ಎಂಬುದಾಗಿಯೂ ಈ ಮೂಲಕ ತಿಳಿಯಪಡಿಸುತ್ತೇವೆ ಎಂದು ವಕೀಲ ಸಂಘದ ಅಧ್ಯಕ್ಷ ಹಾಗು ಸದಸ್ಯರಿಂದ ಮುಖ್ಯಮಂತ್ರಿಗಳಿಗೆ ಮನವಿ ಪಾತ್ರವನ್ನು ನೀಡಲಾಗಿದೆ.