Friday, May 17, 2024
Homeತಾಜಾ ಸುದ್ದಿಮಕ್ಕಳು ಆಡುವಾಗ ಅವರ ಮೇಲಿರಲಿ ಹೆತ್ತವರ ಗಮನ:ಆಡುತ್ತಾ ಧಾನ್ಯದ ಡಬ್ಬದೊಳಗೆ ಹೋಗಿ ಐವರು ಮಕ್ಕಳು ಸಾವು

ಮಕ್ಕಳು ಆಡುವಾಗ ಅವರ ಮೇಲಿರಲಿ ಹೆತ್ತವರ ಗಮನ:ಆಡುತ್ತಾ ಧಾನ್ಯದ ಡಬ್ಬದೊಳಗೆ ಹೋಗಿ ಐವರು ಮಕ್ಕಳು ಸಾವು

spot_img
- Advertisement -
- Advertisement -

ರಾಜಸ್ಥಾನ: ಮಕ್ಕಳು ಅವರ ಪಾಡಿಗೆ ಆಡುತ್ತಿದ್ದಾರೆ ಎಂದು ಹೆತ್ತವರು ತಮ್ಮ ಪಾಡಿಗೆ ಇದ್ದರೆ ಏನಾಗುತ್ತೆ ಅನ್ನೋದಕ್ಕೆ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ.

ಹೆತ್ತವರ ಕಣ್ತಪ್ಪಿನಿಂದಾಗಿ ರಾಜಸ್ಥಾನದ ಬಿಕನೇರ್ ಎಂಬಲ್ಲಿ ಐವರು ಮಕ್ಕಳು ದುರಂತ ಸಾವನ್ನಪ್ಪಿದ್ದಾರೆ. ಮಾಲಿ ಪೂನಮ್, ರವಿನಾ, ರಾಧಾ, ಸೇವರಾಂ ಎಂಬ 4ರಿಂದ 5 ವರ್ಷದ ಮಕ್ಕಳು ಆಟವಾಡುವಾಗ ಅಲ್ಲೇ ಇದ್ದ ಧಾನ್ಯದ ಡಬ್ಬದೊಳಗೆ ಹೋಗಿ ಕುಳಿತುಕೊಂಡಿದ್ದಾರೆ. ಇದನ್ನ ಯಾರು ಗಮನಿಸಿಲ್ಲ. ಮಕ್ಕಳು ಆ ಡಬ್ಬದೊಳಗೆ ಲಾಕ್ ಆಗಿ, ಉಸಿರು‌ ಕಟ್ಟಿದ್ದಾರೆ. ಕೊನೆಗೂ ಹೊರಗೆ ಬರಲಾಗದೆ ಅಲ್ಲಿಯೇ ಸಾವನ್ನಪ್ಪಿದ್ದಾರೆ.

ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಇಂಥ ದುರ್ಘಟನೆ ನಡೆದಿದೆ. ಹೊರಗಿನಿಂದ ಬಂದ ತಾಯಿ ಮಕ್ಕಳನ್ನು ಹುಡುಕಿ ಹುಡುಕಿ ಸಾಕಾಗಿದ್ದಾಳೆ. ಕೊನೆಗೆ ಆ ಬಾಕ್ಸ್ ತೆರದಾಗ ಮಕ್ಕಳು ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ರು ಪ್ರತೋಜನವಾಗಿಲ್ಲ. ಐದು ಮಕ್ಕಳು ಸಾವನ್ನಪ್ಪಿದ್ದಾರೆ.

- Advertisement -
spot_img

Latest News

error: Content is protected !!