Saturday, April 27, 2024
Homeಕರಾವಳಿಬೆಳ್ತಂಗಡಿ : ಲಾಯಿಲದಲ್ಲಿ ಚಿರತೆ ಹಾವಳಿಗೆ ಸಾಕು ನಾಯಿಗಳು ಬಲಿ:ಅರಣ್ಯ ಇಲಾಖೆಯಿಂದ‌ ಪರಿಸರ ಪರಿಶೀಲನೆ

ಬೆಳ್ತಂಗಡಿ : ಲಾಯಿಲದಲ್ಲಿ ಚಿರತೆ ಹಾವಳಿಗೆ ಸಾಕು ನಾಯಿಗಳು ಬಲಿ:ಅರಣ್ಯ ಇಲಾಖೆಯಿಂದ‌ ಪರಿಸರ ಪರಿಶೀಲನೆ

spot_img
- Advertisement -
- Advertisement -

ಬೆಳ್ತಂಗಡಿ: ಕಳೆದ ಒಂದು ತಿಂಗಳಿನಿಂದ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಲ್ಲಿ ಚಿರತೆ ದಾಳಿಗೆ ಸಾಕು ಪ್ರಾಣಿಗಳು ಬಲಿಯಾಗುತ್ತಿದ್ದು,ಸ್ಥಳೀಯರು  ಆತಂಕ ಪಡುವಂತಾಗಿತ್ತು .ಈ ಬಗ್ಗೆ ಅರಣ್ಯ ಇಲಾಖೆಗೆ ಸಾರ್ವಜನಿಕರು ದೂರು ನೀಡಿದ್ದು ಈ ಬಗ್ಗೆ   ಅಧಿಕಾರಿಗಳು ದಾಳಿ ನಡೆದ ಕೆಲವು ಕಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಲ್ಲದೇ ಸ್ಥಳೀಯರು ತಮ್ಮ ಸಾಕುಪ್ರಾಣಿಗಳನ್ನು ಹಾಗೂ ಕಾಡಿನಂಚಿನ ರಸ್ತೆಯಲ್ಲಿ ನಡೆದಾಡುವಾಗ ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಿದರು.

ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿಯಿಂದ ಸ್ಥಳೀಯರಿಗೆ ತೊಂದರೆಯಾಗುತಿದ್ದು ಈ ಬಗ್ಗೆ ಕ್ರಮ ಕೈಗೊಂಡು ಚಿರತೆ ಹಿಡಿಯುವ ಕಾರ್ಯಾಚರಣೆ ಮಾಡುವ ಮೂಲಕ ತೊಂದರೆಗೊಳಗಾದ ಸ್ಥಳೀಯರ  ಆತಂಕ ದೂರ ಮಾಡಬೇಕಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಮನವಿ ಮಾಡಿದರು.

ಅರಣ್ಯ ಇಲಾಖೆಯವರು ಪರಿಶೀಲನೆ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಚಿರತೆಯ ಹೆಜ್ಜೆ ಗುರುತು ಕಂಡುಬಂದಿದ್ದು ಮುಂದಿನ ದಿನಗಳಲ್ಲಿ  ಚಿರತೆಯ ಚಲನವಲನಗಳನ್ನು ಗಮನಿಸಿ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಕಾರ್ಯಾಚರಣೆಯ ಮೂಲಕ ಸೆರೆ ಹಿಡಿಯುವ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಎಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ಲಾಯಿಲ ಗ್ರಾಮದ ಹಂದೆವೂರು ಬೈಲು , ಲಾಯಿಲ ಬೈಲು, ಗಾಣದ ಕೊಟ್ಟಿಗೆ ಸೇರಿದಂತೆ ಸುತ್ತಮುತ್ತಲಿನಿಂದ ಸುಮಾರು 15 ಕ್ಕಿಂತಲೂ ಅಧಿಕ ನಾಯಿಗಳನ್ನು ರಾತ್ರಿ ಸಮಯದಲ್ಲಿ ಚಿರತೆ ದಾಳಿ ನಡೆಸಿ ಕೊಂಡೊಯ್ಯುತಿದ್ದು ಸ್ಥಳೀಯರು ತಮ್ಮ ಸಾಕು ಪ್ರಾಣಿಗಳನ್ನು ಯಾವ ರೀತಿ ರಕ್ಷಿಸಿಕೊಳ್ಳಬಹುದು ಎಂಬ ಬಗ್ಗೆ ಚಿಂತೆಯಲ್ಲಿದ್ದಾರೆ.

Q

ಸಂಬಂಧಪಟ್ಟ ಅರಣ್ಯ ಇಲಾಖೆಯವರು ಬಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ಗ್ರಾಮದ ನಿವಾಸಿಗಳು ನಿಟ್ಟುಸಿರು ಬಿಡು

- Advertisement -
spot_img

Latest News

error: Content is protected !!