Sunday, May 5, 2024
HomeWorldಸೂಪ್ ತಯಾರಿಸಲು ನಾಗರ ಹಾವಿನ ತಲೆ ಕತ್ತರಿಸಿದ ಬಾಣಸಿಗ; 20 ನಿಮಿಷದ ಬಳಿಕ ಸೇಡು ತೀರಿಸಿಕೊಂಡ...

ಸೂಪ್ ತಯಾರಿಸಲು ನಾಗರ ಹಾವಿನ ತಲೆ ಕತ್ತರಿಸಿದ ಬಾಣಸಿಗ; 20 ನಿಮಿಷದ ಬಳಿಕ ಸೇಡು ತೀರಿಸಿಕೊಂಡ ಹಾವು!

spot_img
- Advertisement -
- Advertisement -

ಚೀನಾ : ರೆಸ್ಟೋರೆಂಟ್ ನಲ್ಲಿ ಅಡುಗೆ ಮಾಡುವ ವ್ಯಕ್ತಿಯೊಬ್ಬ ಸೂಪ್ ತಯಾರಿಸಲು ನಾಗರ ಹಾವಿನ ತಲೆ ಕತ್ತರಿಸಿದ್ದು, 20 ನಿಮಿಷದ ಬಳಿಕ ತಲೆಯನ್ನು ಎಸೆಯಲು ಕೈಯಲ್ಲಿ ಹಿಡಿದಾಗ ಹಾವು ಕಚ್ಚಿರುವ ಘಟನೆ ಚೀನಾದಲ್ಲಿ ನಡೆದಿದೆ.

ಗುವಾಂಗ್‌ಡಾಂಗ್ ಪ್ರಾಂತ್ಯದ ಫ್ಯಾಶನ್ ಸಿಟಿಯಲ್ಲಿ ವಾಸವಾಗಿರುವ ಬಾಣಸಿಗ, ಚೆಂಗ್ ಪೆಂಗ್, ಇಂಡೋ-ಚೈನೀಸ್ ಉಗುಳುವ ನಾಗರಹಾವಿನ ಮಾಂಸದ ಸೂಪ್ ತಯಾರಿಸುತ್ತಿದ್ದ. ಈ ವೇಳೆ ಘಟನೆ ನಡೆದಿದ್ದು,ಹಾವು ಕಚ್ಚಿದ ಕಾರಣ ವ್ಯಕ್ತಿ ಸಾವನ್ನಪ್ಪಿದ್ದಾನೆ.

ಚೀನಾದಲ್ಲಿ ವಿಷಕಾರಿ ಹಾವಿನ ಮಾಂಸದ ಸೂಪ್ ಗೆ ಹೆಚ್ಚಿನ ಬೇಡಿಕೆಯಿದ್ದು, ಸೂಪ್ ತಯಾರಿಸಲು ಹಾವಿನ ತಲೆ ಕತ್ತರಿಸಿದ್ದಾನೆ. ಸೂಪ್ ತಯಾರಿಸಲು 20 ನಿಮಿಷ ಹಿಡಿದಿದೆ. ನಂತರ ಅಡಿಗೆ ಕೋಣೆಯನ್ನು ಸ್ವಚ್ಛ ಮಾಡಲು ಶುರು ಮಾಡಿದ್ದಾನೆ. ಈ ವೇಳೆ ಹಾವಿನ ತಲೆಯನ್ನು ಕಸದ ಬುಟ್ಟಿಗೆ ಹಾಕಲು ಮುಂದಾಗಿದ್ದಾನೆ. ಆಗ ಹಾವು ಕಚ್ಚಿದೆ.

ಹಾವು ಕಚ್ಚಿದ ತಕ್ಷಣ ಆತ ಕಿರುಚಾಡಿದ್ದು,ತಕ್ಷಣ ವೈದ್ಯರನ್ನು ಕರೆಸಲಾಗಿದೆ. ಆದರೆ ವೈದ್ಯರು ಬರುವ ಮೊದಲೇ ಆತ ಸಾವನ್ನಪ್ಪಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!