Friday, June 5, 2026
Homeತಾಜಾ ಸುದ್ದಿಚಿರಂಜೀವಿ ಸರ್ಜಾ 'ಕೊರೋನಾ' ವರದಿ ಬಹಿರಂಗ

ಚಿರಂಜೀವಿ ಸರ್ಜಾ ‘ಕೊರೋನಾ’ ವರದಿ ಬಹಿರಂಗ

- Advertisement -
- Advertisement -

ಬೆಂಗಳೂರು: ರಾಜ್ಯದೆಲ್ಲೆಡೆ ಕೊರೋನಾ ಅಟ್ಟಹಾಸ ಮಾಡುತ್ತಿರುವ ಈ ಸಮಯದಲ್ಲಿ ಉಸಿರಾಟ, ಹೃದಯಾಘಾತದಿಂದ ಮೃತಪಟ್ಟ ಖ್ಯಾತ ನಟ ಚಿರಂಜೀವಿ ಸಾವಿನ ನಂತರ ಅವರಿಗೂ ಕರೊನಾ ಇತ್ತಾ? ಎಲ್ಲಾದರೂ ಸದ್ದಿಲ್ಲದೆ ದೇಹದೊಳಗೆ ನುಸುಳಿ ಬಿಟ್ಟಿತ್ತಾ? ಎಂಬ ಅನುಮಾನವೂ ಸಣ್ಣದಾಗಿ ಶುರುವಾಗಿತ್ತು.

ಹಾಗಾಗಿ ಆರೋಗ್ಯ ಇಲಾಖೆ ಮೃತದೇಹದ ಗಂಟಲು ದ್ರವದ ಮಾದರಿಯನ್ನು ಕೊವಿಡ್​-19 ಟೆಸ್ಟ್​ಗೆ ಒಳಪಡಿಸಿಲು ಸೂಚಿಸಿತ್ತು.

ಚಿರಂಜೀವಿ ಅವರ ಕೊವಿಡ್​-19 ತಪಾಸಣೆಯ ವರದಿ ಇದೀಗ ಬಂದಿದ್ದು, ಅವರಿಗೆ ಕರೊನಾ ಸೋಂಕು ಇರಲಿಲ್ಲ ಎಂಬುದು ದೃಢಪಟ್ಟಿದೆ. ಟೆಸ್ಟ್ ಮಾಡಿದ ಮೂರೇ ಗಂಟೆಯಲ್ಲಿ ಕೊವಿಡ್​-19 ವರದಿ ನೆಗೆಟಿವ್​ ಎಂದು ಬಂದಿದೆ. ಸದ್ಯ ಚಿರು ಮೃತದೇಹವನ್ನು ಕಿಮ್ಸ್ ಗೆ ಸ್ಥಳಾಂತರಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ ಎಂದು ವರದಿಯಾಗಿದೆ.

ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಚಿರು ಸರ್ಜಾ ಅಂತ್ಯಕ್ರಿಯೆಯನ್ನು ಬೆಂಗಳೂರಿನಲ್ಲಿ ನಡೆಸುವುದೇ ಅಥವಾ ಸರ್ಜಾ ಕುಟುಂಬದ ಮೂಲ ಊರಾದ ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ನಡೆಯಲಿದೆಯಾ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ.

- Advertisement -

Latest News

error: Content is protected !!