Friday, May 17, 2024
Homeಕರಾವಳಿಬಾಡಿಗೆಗೆ ಫ್ಲ್ಯಾಟ್‌ ಪಡೆಯುವುದಾಗಿ ಸೈನಿಕನ ಹೆಸರಲ್ಲಿ ವಂಚನೆ

ಬಾಡಿಗೆಗೆ ಫ್ಲ್ಯಾಟ್‌ ಪಡೆಯುವುದಾಗಿ ಸೈನಿಕನ ಹೆಸರಲ್ಲಿ ವಂಚನೆ

spot_img
- Advertisement -
- Advertisement -

ಮಂಗಳೂರು: ನಾನು ಸೈನಿಕ ಎಂಜದು ಪರಿಚಯಿಸಿಕೊಂಡು ಬಾಡಿಗೆಗೆ ಫ್ಲ್ಯಾಟ್‌ ಪಡೆಯುವುದಾಗಿ ಹೇಳಿ ನಂಬಿಸಿ ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಮನೆ ಮಾಲೀಕರೊಬ್ಬರು ಬೆಂಗಳೂರಿನಲ್ಲಿ ಬಾಡಿಗೆಗೆ ಫ್ಲ್ಯಾಟ್‌ ಇದೆ  ಎಂದು ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಿದ್ದರು. ಇದನ್ನು ನೋಡಿದ ವ್ಯಕ್ತಿಯೋರ್ವ ತನ್ನನ್ನು ಸೈನಿಕ ದೀಪಕ್‌ ಪವಾರ್‌ ಎಂದು ಪರಿಚಯಿಸಿಕೊಂಡು ಬೆಂಗಳೂರಿಗೆ ವರ್ಗಾವಣೆಯಾಗಿರುವುದಾಗಿ ತಿಳಿಸಿ ಫ್ಲ್ಯಾಟ್‌ ಖರೀದಿಸಲು ಆಸಕ್ತಿ ಇದೆ ಎಂದು ಹೇಳಿದ್ದ.

ಅದರಂತೆ  ಮೇ 15ರಂದು ಸಂಜೆ ಮುಂಗಡವಾಗಿ 50 ಸಾ.ರೂ. ಪಾವತಿಸುವುದಾಗಿ ತಿಳಿಸಿದ್ದ. ಅಲ್ಲದೆ ಈ ಬಗ್ಗೆ ಶಿಬಿರದ ಮೇಲಧಿಕಾರಿಗಳು ಕರೆ ಮಾಡುತ್ತಾರೆ ಎಂದೂ ಹೇಳಿದ್ದ. ಅನಂತರ ಮನೆ ಮಾಲಕರಿಗೆ ಅಧಿಕಾರಿಯೆಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವ ಕರೆ ಮಾಡಿ ಅವರ ಬ್ಯಾಂಕ್‌ ಖಾತೆಗೆ ಸಂಪರ್ಕಗೊಂಡಿರುವ ಗೂಗಲ್‌ ಪೇ ಅಪ್ಲಿಕೇಷನ್‌ ತೆರೆಯಲು ಹೇಳಿದ್ದ. ಮನೆ ಮಾಲಕರು ಅಪರಿಚಿತ ವ್ಯಕ್ತಿ ಸೂಚಿಸಿದಂತೆಯೇ ಮಾಡಿದ್ದರು.

ಅಪರಿಚಿತ ವ್ಯಕ್ತಿ ಖಾತೆಗೆ ಹಣ ಸಂದಾಯ ಮಾಡಿದಂತೆ ತೋರಿಸಿ ವಹಿವಾಟು ವಿಫ‌ಲವಾಗಿದೆ ಎಂದು ತೋರಿಸಿದ್ದ. ಈ ವೇಳೆ ದೂರುದಾರರ ಖಾತೆಯಿಂದ 50,000 ರೂ. ಮತ್ತು 49,000 ರೂ.ಗಳು ವಂಚಕನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ವ್ಯಕ್ತಿಯೋರ್ವರು ಮಂಗಳೂರಿನ ಸೆನ್ ಠಾಣೆಗೆ ದೂರು ನೀಡಿದ್ದಾರೆ.

- Advertisement -
spot_img

Latest News

error: Content is protected !!