Saturday, April 20, 2024
Homeಕರಾವಳಿಉಡುಪಿಉಡುಪಿ:ಪೊಲೀಸ್ ಅಧಿಕಾರಿಗಳಂತೆ ನಟಿಸಿ ವ್ಯಕ್ತಿಯಿಂದ ಹಣ ವಸೂಲಿ ಮಾಡಿದ್ದ ಇಬ್ಬರ ಬಂಧನ

ಉಡುಪಿ:ಪೊಲೀಸ್ ಅಧಿಕಾರಿಗಳಂತೆ ನಟಿಸಿ ವ್ಯಕ್ತಿಯಿಂದ ಹಣ ವಸೂಲಿ ಮಾಡಿದ್ದ ಇಬ್ಬರ ಬಂಧನ

spot_img
- Advertisement -
- Advertisement -

ಉಡುಪಿ:ಪೊಲೀಸ್ ಅಧಿಕಾರಿಗಳಂತೆ ನಟಿಸಿ ವ್ಯಕ್ತಿಯಿಂದ ಹಣ ವಸೂಲಿ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಹಾವೇರಿಯ ಹನುಮಂತಪ್ಪ ಮತ್ತು ಮುರುಡೇಶ್ವರದ ಮಹದೇವಪ್ಪ ಎಂದು ಗುರುತಿಸಲಾದ ಬಂಧಿತರು.ಇವರು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಂಡು ಶಿರ್ವ ನಿವಾಸಿ ಮಂಜುನಾಥ್ ಎಂಬವರಿಂದ ಹಣ ವಸೂಲಿ ಮಾಡಿದ್ದರು.ಮಂಜುನಾಥ್ ತನ್ನ ಸ್ನೇಹಿತರೊಂದಿಗೆ ಮಣಿಪಾಲದ ಅರ್ಬಿ ಫಾಲ್ಸ್ ನಲ್ಲಿ ಮಾತನಾಡುತ್ತಿದ್ದಾಗ ಆರೋಪಿಗಳು ಅಲ್ಲಿಗೆ ಬಂದು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ.

ಈ ವೇಳೆ ಮಂಜುನಾಥ್ ಮಣಿಪಾಲ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅವರನ್ನು ಸಂಪರ್ಕಿಸುವುದಾಗಿ ಹೇಳಿದ್ದಾರೆ.ಈ ವೇಳೆ ಆರೋಪಿಗಳಿಬ್ಬರು ಮತ್ತೊಬ್ಬ ಸಹಚರ ಲಕ್ಷ್ಮಣ ಕುಪ್ಪಗೊಂಡ ಎಂಬಾತನಿಗೆ ದೂರವಾಣಿ ಕರೆ ಮಾಡಿ ಲೌಡ್ ಸ್ಪೀಕರ್‌ ಹಾಕಿದ್ದರು.ಲಕ್ಷ್ಮಣ್ ಮಣಿಪಾಲ ಪೊಲೀಸ್ ಠಾಣೆಯ ಎಸ್‌ಐ ಎಂದು ಯಾಮಾರಿಸಿ ಆರೋಪಿಗಳಿಬ್ಬರಿಗೆ 5 ಸಾವಿರ ರೂಪಾಯಿ ನೀಡಬೇಕು. ಇಲ್ಲವಾದಲ್ಲಿ ಪ್ರಕರಣ ದಾಖಲಿಸುವುದಾಗಿ ಮಂಜುನಾಥ ಅವರಿಗೆ ಹೇಳಿದ್ದಾರೆ‌.ಈ ವೇಳೆ ಭಯಗೊಂಡ
ಮಂಜುನಾಥ್ ಅವರು ಗೂಗಲ್ ಪೇ ಮೂಲಕ 5 ಸಾವಿರ ರೂ.ಹಾಕಿದ್ದಾರೆ.

ಬಳಿಕ ಅನುಮಾನಗೊಂಡ ಮಂಜುನಾಥ್ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಮಣಿಪಾಲ ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿ ಇಬ್ಬರನ್ನು  ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!