Friday, May 3, 2024
Homeತಾಜಾ ಸುದ್ದಿಸರಿಯಾದ ಮಾಹಿತಿ ಇಲ್ಲದೇ ವಿದೇಶಕ್ಕೆ ಸೌದಿ ರಾಷ್ಟ್ರಗಳಿಗೆ ಉದ್ಯೋಗಕ್ಕೆ ಹೋಗುವ ಮಹಿಳೆಯರೇ ಎಚ್ಚರ: ಕೇರಳದಿಂದ ಗಲ್ಫ್...

ಸರಿಯಾದ ಮಾಹಿತಿ ಇಲ್ಲದೇ ವಿದೇಶಕ್ಕೆ ಸೌದಿ ರಾಷ್ಟ್ರಗಳಿಗೆ ಉದ್ಯೋಗಕ್ಕೆ ಹೋಗುವ ಮಹಿಳೆಯರೇ ಎಚ್ಚರ: ಕೇರಳದಿಂದ ಗಲ್ಫ್ ರಾಷ್ಟ್ರಕ್ಕೆ ಹೋದ ಮಹಿಳೆಯರಿಗೆ ಬಹು ದೊಡ್ಡ ಸಂಕಷ್ಟ

spot_img
- Advertisement -
- Advertisement -

ಕೇರಳ: ಗಲ್ಪ್ ರಾಷ್ಟ್ರಗಳಲ್ಲಿ ಕೈ ತುಂಬಾ ದುಡಿಯಬಹುದು ಎಂಬ ಕಾರಣಕ್ಕೆ ಹೆಚ್ಚಾಗಿ ಕೇರಳದಿಂದ ಹೆಣ್ಣು ಮಕ್ಕಳು ಸೌದಿ ರಾಷ್ಟ್ರಗಳತ್ತ ಮುಖ ಮಾಡುತ್ತಾರೆ. ಆದರೆ ಸರಿಯಾದ ಮಾಹಿತಿ ಇಲ್ಲದೇ ಹೋಗಿ ಅದೆಷ್ಟೋ ಹೆಣ್ಣುಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ.

ಇದೇ ರೀತಿ ಗಲ್ಪ್ ರಾಷ್ಟ್ರ ಕುವೈತ್ ಗೆ ನರ್ಸ್, ಬೇಬಿ ಸಿಟ್ಟರ್ ಕೆಲಸಕ್ಕೆಂದು ಸುಳ್ಳು ಹೇಳಿ ಕರೆದುಕೊಂಡು ಹೋಗಿ ದಾಸ್ಯದ ಕೆಲಸಕ್ಕೆ ನಿಲ್ಲಿಸಿ ವಂಚಿಸಿರುವ ಬಗ್ಗೆ ಎರ್ನಾಕುಲಂನ ‌‘ಗೋಲ್ಡನ್ ವಯಾ’ ಹೆಸರಿನ ಕಂಪನಿಯ ಬಗ್ಗೆ ಸಂತ್ರಸ್ತ ಮಹಿಳೆಯರು ಆರೋಪಿಸಿದ್ದಾರೆ.

ಮೂವರು ಮಹಿಳೆಯರಿಗೆ 60,000 ರೂಪಾಯಿಗಳ ಸಂಬಳದ ಪ್ಯಾಕೇಜ್, ಯಾವುದೇ ವೆಚ್ಚವಿಲ್ಲದೆ ಹೋಮ್ ನರ್ಸ್ ಮತ್ತು ಬೇಬಿ ಸಿಟ್ಟರ್‌ಗಳ ಉದ್ಯೋಗ ಇದೆ ಎಂದು ಸುಳ್ಳು ಹೇಳಿ ಕುವೈತ್ ಗೆ ಏಜೆನ್ಸಿ ಕರೆದುಕೊಂಡು ಹೋಗಿತ್ತು.

“ನನ್ನನ್ನು ಕುವೈತ್ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲಾಯಿತು, ಅಲ್ಲಿ ನನ್ನನ್ನು ಗಸ್ಸಾಲಿ ಎಂಬ ಏಜೆಂಟ್ ಕರೆದೊಯ್ದರು, ಅವರು ನನ್ನನ್ನು ಅರಬ್ಬರಿಗೆ ಒಪ್ಪಿಸಿದರು. ಅಲ್ಲಿ ಗಸ್ಸಾಲಿ ನನಗೆ, ಬೇಬಿ ಸಿಟ್ಟರ್ ಅಲ್ಲ ಮನೆ ಕೆಲಸದಾಕೆ ಎಂದು ಅವರು ನನಗೆ ಹೇಳಿದರು. ಬಳಿಕ ಕರೆದುಕೊಂಡು ಮನೆ ಕೆಲಸಕ್ಕೆ ನಿಲ್ಲಿಸಿದ ಮನೆಯಲ್ಲಿ ದೈಹಿಕವಾಗಿ ಮಾನಸಿಕವಾಗಿ ಹಿಂಸೆ ನೀಡಲಾಗಿದೆ ಎಂದು ಸಂತ್ರಸ್ತೆ ಮಹಿಳೆ ಆರೋಪಿಸಿದ್ದಾರೆ.

ಮಹಿಳೆ ಆಡಿಯೊ ಕ್ಲಿಪ್‌ನಲ್ಲಿ , ಉದ್ಯೋಗದಾತರ ಕೈಯಲ್ಲಿ ತೀವ್ರ ದೈಹಿಕ ಮತ್ತು ಮಾನಸಿಕ ಆಘಾತಕ್ಕೆ ಒಳಗಾಗಿದ್ದೇನೆ ಎಂದು ಹೇಳುತ್ತಾರೆ. ಎಂಕೆ ಗಸ್ಸಾಲಿ ಕಳ್ಳಸಾಗಣೆ ಜಾಲದ ಕಿಂಗ್‌ಪಿನ್ ಎಂದು ಆರೋಪಿಸಿದ್ದಾರೆ.

ನಮ್ಮನ್ನು ಲಾಕ್‌ ಮಾಡಲಾಗಿದೆ ನನಗೆ ದಿನಕ್ಕೆ ಒಂದು ಕುಬೂಸ್ ನೀಡುತ್ತಾರೆ ಮತ್ತು ನನ್ನನ್ನು ಚಪ್ಪಲಿಯಿಂದ ಹೊಡೆಯುತ್ತಾರೆ. ಹಿಂಸೆ ನೀಡುತ್ತಾರೆ. ಏಜೆಂಟ್ ಕೂಡ ಮನಬಂದಂತೆ ‌ಥಳಿಸುತ್ತಾರೆ ಎಂದು‌ ಮಹಿಳೆಯರು‌ ವಾಟ್ಸಾಪ್ ಆಡಿಯೋದಲ್ಲಿ ನೋವನ್ನು‌ ತೋಡಿಕೊಂಡು ಸಹಾಯ ಮಾಡುವಂತೆ ಮಲಯಾಳಿಗಳಿಗೆ ಮನವಿ ಮಾಡಿದ್ದಾರೆ. ಇನ್ನಾದ್ರೂ ಹೆಣ್ಣುಮಕ್ಕಳು  ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ.

- Advertisement -
spot_img

Latest News

error: Content is protected !!