- Advertisement -
![]()
- Advertisement -
ವಿಟ್ಲ: ವಿಟ್ಲದ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಚರಿತ್ 5 ನೇ ರಾಷ್ಟೀಯ ಪಿನ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕವನ್ನ ಪಡೆದಿದ್ದಾರೆ.
ಅಂಡರ್ ವಾಟರ್ ಸ್ಪೋರ್ಟ್ಸ್ ಪೆಡರೆಷನ್ ಆಫ್ ಇಂಡಿಯಾ ವತಿಯಿಂದ ಫಿಸಿಕಲ್ ಪೌಂಡೆ ಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಪಿನ್ ಸ್ವಿಮ್ಮಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಮಂಗಳೂರಿನ ಎಮ್ಮೆಕೆರೆ ಅಂತರ್ರಾಷ್ಟ್ರೀಯ ಈಜುಕೋಲದಲ್ಲಿ ಡಿಸೆಂಬರ್ 19 ರಿಂದ 22 ರವರೆಗೆ ನಡೆದ 5 ನೇ ರಾಷ್ಟ್ರೀಯ ಪಿನ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ 2025 ರಲ್ಲಿ ಚರಿತ್ ಅಮೀನ್ ಕೆ ಇವರು 50 ಮೀಟರ್ ಬೈ ಪಿನ್ ಸ್ವಿಮ್ಮಿಂಗ್ ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ.
ವಿಟ್ಲ ಕಸಬ ಗ್ರಾಮದ ಕೊಪ್ಪಳ ನಿವಾಸಿಗಳಾದ ಚಂದ್ರಹಾಸ್ ಕೊಪ್ಪಳ ಮತ್ತು ಸೌಮ್ಯ ದಂಪತಿಗಳ ಪುತ್ರರಾದ ಚರಿತ್ ಪುತ್ತೂರಿನ ಬಾಲವನ ಈಜುಕೊಳದಲ್ಲಿ ಈಜು ನಿರ್ದೇಶಕರಾದ ಪಾರ್ಥ ವಾರಣಾಸಿ ಹಾಗೂ ತರಬೇತುದಾರಿಂದ ತರಬೇತಿ ಪಡೆಯುತ್ತಿದ್ದಾರೆ.
- Advertisement -


