Monday, August 31, 2026
Homeತಾಜಾ ಸುದ್ದಿಮೂರನೇ ವಿಡಿಯೋ ರಿಲೀಸ್ ಮಾಡಿದ ಸಿಡಿ ಲೇಡಿ: ಇವತ್ತು ಎಸ್ ಐಟಿ ಮುಂದೆ ಹಾಜರಾಗುವ ಸಾಧ್ಯತೆ..

ಮೂರನೇ ವಿಡಿಯೋ ರಿಲೀಸ್ ಮಾಡಿದ ಸಿಡಿ ಲೇಡಿ: ಇವತ್ತು ಎಸ್ ಐಟಿ ಮುಂದೆ ಹಾಜರಾಗುವ ಸಾಧ್ಯತೆ..

- Advertisement -
- Advertisement -

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿ 3ನೇ ವಿಡಿಯೋ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಎಂದು ಹೇಳಿದ್ದಾಳೆ. ಅಲ್ಲದೇ ಇಂದು ಸಿಡಿ ಲೇಡಿ ಎಸ್ ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

3ನೇ ವಿಡಿಯೋ ಹೇಳಿಕೆ ರಿಲೀಸ್ ಮಾಡಿರುವ ಯುವತಿ. ಕಳೆದ 24 ದಿನಗಳಿಂದ ನಾನು ಜೀವ ಬೆದರಿಕೆಯಲ್ಲಿದ್ದೆ. ಇಷ್ಟು ದಿನ ನಾನು ಭಯದಲ್ಲೇ ಇದ್ದೇನೆ. ಈಗ ನನಗೆ ಸ್ವಲ್ಪ ಧೈರ್ಯ ಬಂದಿದೆ. ಆ ಧೈರ್ಯಕ್ಕೆ ಕಾರಣ ರಾಜ್ಯದ ಜನತೆ, ಎಲ್ಲಾ ತಂದೆ-ತಾಯಂದಿರು, ಎಲ್ಲಾ ಪಕ್ಷಗಳ ನಾಯಕರು, ಎಲ್ಲಾ ಸಂಘಟನೆಗಳು ನನಗೆ ನೀಡುತ್ತಿರುವ ಬೆಂಬಲ. ಹಾಗಾಗಿ ನಾನು ನನ್ನ ಲಾಯರ್ ಜಗದೀಶ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಿಸುತ್ತಿದ್ದೇನೆ ಎಂದು ಹೇಳಿದ್ದಾಳೆ.

ಒಟ್ಟಾರೆ ಸಿಡಿ ಲೇಡಿ ನಡೆ ತೀವ್ರ ಕುತೂಹಲ ಕೆರಳಿಸಿದ್ದು, ಯುವತಿ ದೂರು ನೀಡಿದ ಬಳಿಕ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಲಿದೆ ಎನ್ನಲಾಗುತ್ತಿದೆ.

- Advertisement -

Latest News

error: Content is protected !!