Wednesday, May 1, 2024
Homeಅಪರಾಧಗ್ಯಾಂಬ್ಲಿಂಗ್ ಆರೋಪ: ನಟಿ ನೇಹಾ ಶೆಟ್ಟಿ ತಂದೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ !

ಗ್ಯಾಂಬ್ಲಿಂಗ್ ಆರೋಪ: ನಟಿ ನೇಹಾ ಶೆಟ್ಟಿ ತಂದೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ !

spot_img
- Advertisement -
- Advertisement -

ಬೆಂಗಳೂರು: ಗ್ಯಾಂಬ್ಲಿಂಗ್ ದಂಧೆ ನಡೆಸುತ್ತಿರುವ ಆರೋಪದ ಹಿನ್ನೆಲೆಯಲ್ಲಿ ನಟಿ ನೇಹಾ ಶೆಟ್ಟಿ ತಂದೆ ಹರಿರಾಜ್ ಶೆಟ್ಟಿ ಮೇಲೆ ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ‘ಪೂಲ್ ಮತ್ತು ರಿ ಕ್ರಿಯೇಷನ್’ ಹೆಸರಿನಲ್ಲಿ ಕ್ಲಬ್‌ ನಿರ್ಮಿಸಿ, ಅದರಲ್ಲಿ ಜೂಜು, ವಿಡಿಯೋ ಗೇಮ್ ಪಾರ್ಲರ್ ನಡೆಸುತ್ತಿದ್ದ ಅಡ್ಡಾವನ್ನು ರೈಡ್ ಮಾಡಿದ ಪೊಲೀಸರು ಹರಿರಾಜ್‌ ಶೆಟ್ಟಿ ಅವರನ್ನು ಜೂನ್ 5 ರಂದು ಬಂಧಿಸಿದ್ದರು. ದಾಳಿ ವೇಳೆ 42 ಜೂಜುಕೋರರು ಕೂಡ ಸಿಕ್ಕಿ ಬಿದ್ದಿದ್ದು, ಕ್ಲಬ್‌ನಲ್ಲಿದ್ದ ಲಕ್ಷ ಲಕ್ಷ ಹಣವನ್ನು ಪೋಲೀಸರು ವಶ ಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಸಿಸಿಬಿ ಇನ್ಸ್ ಪೆಕ್ಟರ್ ಎ.ಪಿ ಕುಮಾರ್ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದ್ದು, ನಗರದಲ್ಲಿ ಜೂಜು ಅಡ್ಡೆ ನಿರ್ಮಿಸಿ ಕಾನೂನು ಬಾಹಿರ ಕೃತ್ಯ ಕೇಸ್ ದಾಖಲಾಗಿದೆ. ಪೂಲ್‍ಎನ್, ರಿ ಕ್ರಿಯೇಷನ್ ಕ್ಲಬ್ ಹೆಸರಿನಲ್ಲಿ ಗ್ಯಾಂಬ್ಲಿಂಗ್, ಬ್ಯಾನ್ ಸ್ಕಿಲ್ ಗೇಮ್, ವಿಡಿಯೋ ಗೇಮ್ ಪಾರ್ಲರ್ ನಡೆಸ್ತಿದ್ದ ಆರೋಪದಡಿ ಹರಿರಾಜ್ ವಿರುದ್ಧ ಬರೋಬ್ಬರಿ 250 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.

ಪೊಲೀಸರು ಬಂಧಿಸಿರುವವರಲ್ಲಿ ಬೆಂಗಳೂರು, ಚಿಕ್ಕಬಳ್ಳಾಪುರ, ಬಳ್ಳಾರಿ ಮಾತ್ರವಲ್ಲದೇ ಆಂಧ್ರ ಮತ್ತು ತಮಿಳುನಾಡಿನವರು ಇದ್ದರು ಎನ್ನಲಾಗಿದೆ. ಖಾಸಗಿ ವೆಬ್‌ಸೈಟ್ ವರದಿ ಮಾಡಿರುವ ಪ್ರಕಾರ ಹರಿರಾಜ್‌ ಶೆಟ್ಟಿ ಮಹಿಳೆಯರನ್ನು ಕರೆದುಕೊಂಡು ಬರುತ್ತಿದ್ದ ಮಾಹಿತಿಯೂ ಬಹಿರಂಗವಾಗಿ. ಬಂಧಿತರಲ್ಲಿ 5 ಮಂದಿ ಮಹಿಳೆಯರಿದ್ದಾರೆ. ಇದರಲ್ಲಿ ಉದ್ಯಮಿಗಳ ಪತ್ನಿಯರು, ಸರ್ಕಾರಿ ಅಧಿಕಾರಿಗಳ ಪತ್ನಿಯರು ಹಾಗೂ ರೌಡಿ ಶೀಟರ್‌ ತಾಯಿ ಕೂಡ ಇದ್ದಾರೆ ಎಂದು ಹೇಳಲಾಗಿದೆ.

- Advertisement -
spot_img

Latest News

error: Content is protected !!