Thursday, June 4, 2026
Homeಕರಾವಳಿಮಿತ್ತಬಾಗಿಲು: ರಿಕ್ಷಾದಲ್ಲಿ 70 ಕೆಜಿ ದನದ ಮಾಂಸ ಸಾಗಾಟ ಪತ್ತೆ ಹಚ್ಚಿದ ಭಜರಂಗದಳದ ಕಾರ್ಯಕರ್ತರು

ಮಿತ್ತಬಾಗಿಲು: ರಿಕ್ಷಾದಲ್ಲಿ 70 ಕೆಜಿ ದನದ ಮಾಂಸ ಸಾಗಾಟ ಪತ್ತೆ ಹಚ್ಚಿದ ಭಜರಂಗದಳದ ಕಾರ್ಯಕರ್ತರು

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ಮಿತ್ತಬಾಗಿಲು ಗ್ರಾಮದ ಎರ್ಮಾಳ್ಪಲ್ಕೆ ಗಜಂತೋಡಿ ರಸ್ತೆಯಲ್ಲಿ ಅಕ್ರಮವಾಗಿ ಸುಮಾರು 70 ಕೆ.ಜಿ ದನದ ಮಾಂಸವನ್ನು ಆಪೆ ರಿಕ್ಷಾದಲ್ಲಿ ಸಾಗಿಸುತ್ತಿದ್ದ ಘಟನೆ ನಡೆದಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯ ಭಜರಂಗದಳ ಕಾರ್ಯಕರ್ತರು, KA21B3001 ನೋಂದಣಿ ಸಂಖ್ಯೆಯ ಆಪೆ ರಿಕ್ಷಾವನ್ನು ಅಡ್ಡ ಹಾಕಿ ರಿಕ್ಷಾದಲ್ಲಿದ್ದ ಓರ್ವ ಆರೋಪಿಯನ್ನು ಬೆಳ್ತಂಗಡಿ ಪೊಲೀಸರ ವಶಕ್ಕೆ ನೀಡಲಾಗಿದೆ.

ಸುಮಾರು 70 ಕೆ.ಜಿ ದನದ ಮಾಂಸ ಪತ್ತೆಯಾಗಿದ್ದು, ಕಾಜೂರು ಕಡೆಯಿಂದ ಮಾಂಸ ಮಾಡಿ ಎರ್ಮಾಳ‌ಪಲ್ಕೆ, ಕುಕ್ಕಾವು ರಸ್ತೆಯಾಗಿ ಬರುತ್ತಿದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು ,ಸ್ಥಳದಲ್ಲೇ ಜನರು ಜಾಮಾಯಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನಲ್ಲಿ ಕೆಲದಿನಗಳಿಂದ ಅಕ್ರಮ ದನ ಸಾಗಾಟ ಮತ್ತು ಮಾಂಸ ದಂಧೆ ಹೆಚ್ಚಾಗಿದ್ದು ಪೊಲೀಸರಿಗೆ ತಲೆನೋವಾಗಿದೆ.

- Advertisement -

Latest News

error: Content is protected !!