- Advertisement -
- Advertisement -
ಬೈಂದೂರು: ಸಾಮಾಜಿಕ ಜಾಲತಾಣದಲ್ಲಿ ಗೋಹತ್ಯೆಯ ವಿಡಿಯೋವೊಂದನ್ನು ಹಂಚಿಕೊಂಡ ಆರೋಪದಲ್ಲಿ ಕೆಲ ವ್ಯಕ್ತಿಗಳ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಲಿ ರಿಜ್ವಾನ್, ಮೌಲ್ವಿ, ಉರ್ದು ಶಾಲೆಯ ಮುಖ್ಯಸ್ಥ, ಮೌಲ್ಲಾನ ಹಾಡಿ, ಇಲಿಯಾಸ್, ಮಾಲಿ ಸುಭಾನ್, ಅಬು ಸಲಿ, ಅಬ್ದುಲ್ ರಜಾಕ್, ಮಜೀದ್ ಅಲಿಯಾಸ್ ಫಿಟ್ಟರ್ ಮಜೀದ್, ಮೊಹಮ್ಮದ್ ಇಬ್ರಾಹಿಂ, ಇಮಾಮ್ ಶೇಖ್ ಹಾಗೂ ಇತರರನ್ನು ಆರೋಪಿಗಳು ಎಂದು ಗುರುತಿಸಲಾಗಿದೆ.
ಗೋಹತ್ಯೆ ಮಾಡಿದ ವಿಡಿಯೋವನ್ನು ಸೆ.24ರಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದು, ಕೋಮುಗಲಭೆ ಆರಂಭಿಸುವ ಉದ್ದೇಶದಿಂದ ಸಾರ್ವಜನಿಕ ಸ್ಥಳಗಳಲ್ಲಿ ಗೋಹತ್ಯೆ ಮಾಡಲಾಗಿದೆ.ಅಲ್ಲದೆ ಜಾನುವಾರುಗಳನ್ನು ಕದ್ದು ಹಿಂಸಾತ್ಮಕ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -