Friday, June 5, 2026
Homeಕರಾವಳಿಮಂಗಳೂರುಪುತ್ತೂರು: ಸ್ಕಿಡ್‌ ಆಗಿ ತೋಟಕ್ಕೆ ಉರುಳಿದ ಕಾರು

ಪುತ್ತೂರು: ಸ್ಕಿಡ್‌ ಆಗಿ ತೋಟಕ್ಕೆ ಉರುಳಿದ ಕಾರು

- Advertisement -
- Advertisement -

ಪುತ್ತೂರು: ಕಾರೊಂದು ಸ್ಕಿಡ್ ಆಗಿ ತೋಟಕ್ಕೆ ಉರುಳಿದ ಘಟನೆ ಕಾಣಿಯೂರು-ಸುಬ್ರಹ್ಮಣ್ಯ ಮುಖ್ಯರಸ್ತೆಯ ಗಡಿಪಿಲದಲ್ಲಿರುವ ಕರೆಮನೆ ಕಟ್ಟೆ ಬಳಿ ನಡೆದಿದೆ.

ಚಾಲಕ ಕಾರನ್ನು ಮುಖ್ಯ ರಸ್ತೆಯಿಂದ ಪಕ್ಕಕ್ಕೆ ಇಳಿಸುತ್ತಿದ್ದಾಗ, ಕಾರು ನಿಯಂತ್ರಣ ತಪ್ಪಿದೆ. ನಂತರ ತೋಟಕ್ಕೆ ಉರುಳಿಬಿದ್ದಿದೆ.

ಚಾಲಕ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ದಾರಿ ಕೊಡಲು ಹೋಗಿ ಕಾರನ್ನು ರಸ್ತೆಯ ಅಂಚಿಗೆ ತೆಗೆದುಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಕಾರು ಸ್ಕಿಡ್‌ ಆಗಿ ರಸ್ತೆ ಬದಿಯಲ್ಲಿದ್ದ ತೋಟಕ್ಕೆ ಬಿದ್ದಿದೆ. ಅದೃಷ್ಟವಶಾತ್‌ ಕಾರಿನಲ್ಲಿದ್ದವರಿಗೆ ಯಾರಿಗೂ ಗಾಯವಗಿಲ್ಲ ಎನ್ನಲಾಗಿದೆ.

- Advertisement -

Latest News

error: Content is protected !!