Saturday, June 27, 2026
Homeಕರಾವಳಿಮಂಗಳೂರುಮಂಗಳೂರು: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ

ಮಂಗಳೂರು: ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿಗೆ ಬೆಂಕಿ

- Advertisement -
- Advertisement -

ಮಂಗಳೂರು: ವಾಹನ ನಿಲುಗಡೆ ಪ್ರದೇಶದಲ್ಲಿ ನಿಲ್ಲಿಸಲ್ಪಟ್ಟಿದ್ದ ಕಾರಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿರುವ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.

ಮಂಗಳೂರು ಹೊರವಲಯದ ಬೋಂದೆಲ್, ನಿನ್ನೆ ರಾತ್ರಿ ಸುಮಾರು 11.30ರ ವೇಳೆಗೆ ಬೆಂಕಿ ಅನಾಹುತ ನಡೆದು ಕಾರು ಸುಟ್ಟು ಹೋಗಿದೆ.

ಕಾರಿಗೆ ಹತ್ತಿಕೊಂಡಿದ್ದ ಬೆಂಕಿಯಿಂದಾಗಿ ಸುತ್ತಮುತ್ತಲಿನ ಪ್ರದೇಶಕ್ಕೂ ಹಾನಿ ಉಂಟಾಗಿದ್ದು, ಬೆಂಕಿ ಗಮನಿಸಿದ ತಕ್ಷಣ ನಂದಿಸಿದ್ದಾರೆ.

ಆದರೆ ಬೆಂಕಿಯ ಜ್ವಾಲೆ ವ್ಯಾಪಿಸುತ್ತಿದ್ದ ಹಿನ್ನೆಲೆಯಲ್ಲಿ ಅಗ್ನಿಶಾಮದ ದಳದಿಂದಲೂ ಕಾರ್ಯಾಚರಣೆ ನಡೆದಿದೆ.

- Advertisement -

Latest News

error: Content is protected !!