Friday, June 5, 2026
Homeಕರಾವಳಿಉಡುಪಿಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ರೇಸ್ ಮಾಡುತ್ತಿದ್ದ ನಾಲ್ವರು ವಶಕ್ಕೆ

ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ರೇಸ್ ಮಾಡುತ್ತಿದ್ದ ನಾಲ್ವರು ವಶಕ್ಕೆ

- Advertisement -
- Advertisement -

ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರ್ ರೇಸ್ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸುತ್ತಿದ್ದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ನಾಲ್ವರು ಚಾಲಕರ ಸಹಿತ ನಾಲ್ಕು ವಾಹನಗಳನ್ನು ಕಾಪು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಉಡುಪಿಯ ಶಾನೂನ್ ಡಿಸೋಜ(25), ಉಡುಪಿ‌ ಕೊಡಂತೂರಿನ ವಿವೇಕ್(23), ಉದ್ಯಾವರ ಗುಡ್ಡೆ ಅಂಗಡಿ ನಿವಾಸಿ ಅಯಾನ್( 24) ಹಾಗೂ ಕುಂಜಿಬೆಟ್ಟು ನಿವಾಸಿ ಮಿಶಾಲುದ್ದೀನ್ (23) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಂದ ಮಹೀಂದ್ರಾ ಜೀಪು, ಕ್ರೆಟಾ ಕಾರು, ಫಾರ್ಚುನರ್‌ ಕಾರು, ಸ್ವಿಫ್ಟ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಈ ಬಗ್ಗೆ ಕಾಪು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!