Thursday, June 4, 2026
Homeಕರಾವಳಿಮಂಗಳೂರು : ಸುರತ್ಕಲ್ ಫಾಜಿಲ್ ಹತ್ಯೆ ಪ್ರಕರಣ : ಹಂತಕರು ಬಳಸಿದ ಕಾರಿನ ಮಾಲೀಕ ಪೊಲೀಸ್...

ಮಂಗಳೂರು : ಸುರತ್ಕಲ್ ಫಾಜಿಲ್ ಹತ್ಯೆ ಪ್ರಕರಣ : ಹಂತಕರು ಬಳಸಿದ ಕಾರಿನ ಮಾಲೀಕ ಪೊಲೀಸ್ ವಶಕ್ಕೆ

- Advertisement -
- Advertisement -

ಮಂಗಳೂರು : ಮಂಗಳೂರು ಸುರತ್ಕಲ್ ನಲ್ಲಿ‌ ಜುಲೆ 28 ರ ರಾತ್ರಿ ನಡೆದಿದ್ದ ಫಾಜಿಲ್‌ ಹತ್ಯೆ ಪ್ರಕರಣ ಸಂಬಂಧ ಹಂತಕರು ಉಪಯೋಗಿಸುತ್ತಿದ್ದ ಹುಂಡೈ ಕಂಪನಿಯ ಇಯೋನ್ ಕಾರು ಮಾಲೀಕ ಸುರತ್ಕಲ್ ಕೋಡಿಕೆರೆ ನಿವಾಸಿ ಅಜಿತ್ ಕ್ರಾಸ್ಟಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕ್ರಿಶ್ಚಿಯನ್ ಸಮುದಾಯದ ಅಜಿತ್ ಕ್ರಾಸ್ಟಾ ಈ ಹಿಂದೆ ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಮದುವೆಯಾದ ಬಳಿಕ ಕಾರು ಬಾಡಿಗೆಗೆ ನೀಡುವ ಉದ್ಯಮ ಶುರುಮಾಡಿದ್ದ. ಅದರಂತೆ ಸ್ವಿಫ್ಟ್, ಸ್ವಿಫ್ಟ್ ಡಿಸೈರ್, ಇಯೋನ್ ಕಾರು ಒಟ್ಟು ಮೂರು ಕಾರುಗಳನ್ನು ಇಟ್ಟುಕೊಂಡು ಬಾಡಿಗೆಗೆ ನೀಡುವ ಕೆಲಸ‌ ಮಾಡುತ್ತಿದ್ದ. ಮೊನ್ನೆ ಕೂಡ ಪರಿಚಯಸ್ಥ ಹಂತಕರು ಇಯೋನ್ ಕಾರು ಬಾಡಿಗೆ ಪಡೆದುಕೊಂಡು ಕೃತ್ಯ ಎಸಗಿದ್ದರು ಎನ್ನಲಾಗಿದೆ.

ಇನ್ನು ಕಾರು ಮಾಲೀಕ ಅಜಿತ್ ಕ್ಯಾಸ್ವಾ ಯಾವ ರೀತಿಯಲ್ಲಿ ಕೃತ್ಯ ಎಸೆಯಲು ಕಾರಣವಾಗಿದ್ದಾನೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿಯಲಿದೆ‌.

- Advertisement -

Latest News

error: Content is protected !!