- Advertisement -
- Advertisement -
ಮಂಗಳೂರು: ಮಂಗಳೂರಿನ ಬಲ್ಲಾಳ್ ಬಾಗ್ ನಲ್ಲಿ ಬಿಎಮ್ ಡಬ್ಲ್ಯೂ ಕಾರು ಸರಣಿ ಅಪಘಾತ ಪ್ರಕರಣದಲ್ಲಿ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಾಲಕ ಶ್ರವಣ್ ಕುಮಾರ್ (30) ಪೊಲೀಸರ ವಶಕ್ಕೆ ಪಡೆಯಲಾಗಿದ್ದು,
ಇಂಟಿರಿಯರ್ ಡೆಕೋರೇಟರ್ ನಿರಂಜನ್ ಎಂ.ಎನ್. ಮತ್ತು
ಮಣ್ಣಗುಡ್ಡ ನಿವಾಸಿ ಶ್ರವಣ್ ಕುಮಾರ್ ಅವರ ಕಾರುಗಳು ಡಿಕ್ಕಿಯಾಗಿದ್ದವು.
ಎರಡು ಕಾರು, ಎರಡು ಬೈಕ್ ಗಳ ಸರಣಿ ಅಪಘಾತ ಸಂಭವಿಸಿತ್ತು.
ಸ್ಕೂಟರ್ ಸವಾರೆ ಪ್ರೀತಿ ಮನೋಜ್(47) ಗಂಭೀರವಾಗಿ ಗಾಯಗೊಂಡಿದ್ದು,
ಕಾರ್ ನಲ್ಲಿದ್ದ ಅಮನ್ ಜಯದೇವನ್ (7) ಗೆ ಕೂಡಾ ಗಾಯವಾಗಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು,
ಮಂಗಳೂರು ಪಶ್ಚಿಮ ಸಂಚಾರಿ ಪೊಲೀಸ್ ಪೊಲೀಸ್ ಠಾಣೆಯಲ್ಲಿ
ಐಪಿಸಿ ಸಕ್ಷನ್ 279, 338 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -