Thursday, June 4, 2026
Homeತಾಜಾ ಸುದ್ದಿಪುತ್ತೂರು: ಕಾರು ಮತ್ತು ಬಸ್ಸು ಪರಸ್ಪರ ಡಿಕ್ಕಿ; ಕಾರಿನಲ್ಲಿದ್ದ ಚಾಲಕ ಹಾಗೂ ಮಗುವಿಗೆ ಗಾಯ

ಪುತ್ತೂರು: ಕಾರು ಮತ್ತು ಬಸ್ಸು ಪರಸ್ಪರ ಡಿಕ್ಕಿ; ಕಾರಿನಲ್ಲಿದ್ದ ಚಾಲಕ ಹಾಗೂ ಮಗುವಿಗೆ ಗಾಯ

- Advertisement -
- Advertisement -

ಪುತ್ತೂರು: ಕಾರು ಮತ್ತು ಬಸ್ಸು ನಡುವೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಚಾಲಕ ಹಾಗೂ ಮಗುವಿಗೆ ಗಾಯಗಳಾದ ಘಟನೆ ರಾ ಹೆ.75ರ ಗುಂಡ್ಯ ಸಮೀಪದ ಬರ್ಚಿನ ಹಳ್ಳ ಎಂಬಲ್ಲಿನಡೆದಿದೆ.


ಗಾಯಗೊಂಡವರನ್ನು ಇಕ್ವಾಲ್ ಹಾಗೂ ನಿಹಾಲ್ ಎಂದು ಗುರುತಿಸಲಾಗಿದೆ. ಧರ್ಮಸ್ಥಳದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಬಸ್ಸಿಗೆ ಹಾಸನದಿಂದ ಮಂಗಳೂರಿಗೆ ಬರುತ್ತಿದ್ದಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ.


ಕಾರಿನಲ್ಲಿ ಒಟ್ಟು ಐದು ಪ್ರಯಾಣಿಕರಿದ್ದು ಉಳಿದವರು ಅಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!