Friday, May 3, 2024
Homeಕರಾವಳಿಪಾಣೆಮಂಗಳೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಾರಿದ ಕಾರು, ಇಬ್ಬರಿಗೂ ಗಂಭೀರ ಗಾಯ !

ಪಾಣೆಮಂಗಳೂರಿನಲ್ಲಿ ಇಬ್ಬರು ವಿದ್ಯಾರ್ಥಿಗಳ ಮೇಲೆ ಹಾರಿದ ಕಾರು, ಇಬ್ಬರಿಗೂ ಗಂಭೀರ ಗಾಯ !

spot_img
- Advertisement -
- Advertisement -

ಬಂಟ್ವಾಳ: ಕಾರೊಂದು ವಿದ್ಯಾರ್ಥಿಗಳ ಮೇಲೆ ಕಾರು ಹರಿದ ಘಟನೆ ನಡೆದಿದೆ. ಬಸ್ಸಿನಿಂದ ಇಳಿದು ಮನೆಯ ಕಡೆಗೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಕಾರು ಹರಿದಿದೆ. ಇದರಿಂದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಈ ಘಟನೆ ಪಾಣೆಮಂಗಳೂರು ಎಂಬಲ್ಲಿ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಗಳು ಮಹಮ್ಮದ್ ಸಲೀಂ ಹಾಗೂ ಸಿಂಚನ.

ಚಾಲಕನ ಅಜಾಗರೂಕತೆಯಿಂದ ಕಾರು ವಿದ್ಯಾರ್ಥಿಗಳ ಮೇಲೆ ಹರಿದು ಬಳಿಕ ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ಈ ಘಟನೆಯಿಂದ ವಿದ್ಯಾರ್ಥಿ ಮಹಮ್ಮದ್ ಸಲೀಂ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಾಗೇ ಸಿಂಚನ ಎಂಬ ವಿದ್ಯಾರ್ಥಿನಿಗೂ ಗಾಯವಾಗಿದ್ದು ಅವಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!