Monday, May 13, 2024
Homeತಾಜಾ ಸುದ್ದಿಭೀಕರ ಕಾರು ಅಪಘಾತ, ಮಾಜಿ ಬಿಗ್ ಬಾಸ್ ಸ್ಪರ್ಧಿಗೆ ಗಂಭೀರ ಗಾಯ

ಭೀಕರ ಕಾರು ಅಪಘಾತ, ಮಾಜಿ ಬಿಗ್ ಬಾಸ್ ಸ್ಪರ್ಧಿಗೆ ಗಂಭೀರ ಗಾಯ

spot_img
- Advertisement -
- Advertisement -

ಚೆನ್ನೈ: ಬಿಗ್ ಬಾಸ್ ತಮಿಳು ಮಾಜಿ ಸ್ಪರ್ಧಿ ಯಶಿಕಾ ಆನಂದ್ ಕಾರು ಅಪಘಾತಕ್ಕೀಡಾಗಿ, ನಟಿ ಗಂಭೀರ ಗಾಯಗೊಂಡಿದ್ದು ಆಕೆಯ ಸ್ನೇಹಿತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ನೇಹಿತರ ಜೊತೆಗೆ ಯಶಿಕಾ ಆನಂದ್ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು ಈ ವೇಳೆ ಮಹಾಬಲಿಪುರಂ ಬಳಿ ಅಪಘಾತ ಸಂಭವಿಸಿದ್ದು, ಆಕ್ಸಿಡೆಂಟ್‌ನಲ್ಲಿ ಯಶಿಕಾ ಆನಂದ್ ಅವರ ಸ್ನೇಹಿತೆ ವಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಶಿಕಾ ಆನಂದ್ ಗಂಭೀರವಾಗಿ ಗಾಯಗೊಂಡಿದ್ದಾರೆ.

‘ಧುರುವಾಂಗಲ್ ಪಾಥಿನಾರು’ ಮೂಲಕ ಖ್ಯಾತಿ ಗಳಿಸಿದ ನಟಿ ಯಶಿಕಾ ಆನಂದ್ ಪ್ರಯಾಣ ಮಾಡುತ್ತಿದ್ದ ಕಾರು ಇಂದು ಮಧ್ಯ ರಾತ್ರಿ 1 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿದೆ. ಮಹಾಬಲಿಪುರಂನ ಈಸ್ಟ್ ಕೋಸ್ಟ್ ರೋಡ್‌ನಲ್ಲಿ ಯಶಿಕಾ ಆನಂದ್ ಅವರ ಕಾರು ಅತಿ ವೇಗವಾಗಿ ಸಾಗುತ್ತಿತ್ತು. ಅತಿಯಾದ ವೇಗ ನಿಯಂತ್ರಣಕ್ಕೆ ಸಿಗದೆ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು, ಬಳಿಕ ಹಳ್ಳಕ್ಕೆ ಜಾರಿ ಬಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಾರಿನಲ್ಲಿದ್ದವರನ್ನು ರಕ್ಷಿಸಲು ಪ್ರತ್ಯಕ್ಷದರ್ಶಿಗಳು ಓಡಿ ಬಂದರು. ಅಷ್ಟರಲ್ಲಾಗಲೇ, ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡವರನ್ನು ಪ್ರತ್ಯಕ್ಷದರ್ಶಿಗಳು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದರು. ವರದಿಗಳ ಪ್ರಕಾರ, ಕಾರಿನಲ್ಲೇ ಸಿಲುಕಿದ್ದ ವಲ್ಲಿಚೆಟ್ಟಿ ಭವಾನಿ ಸ್ಥಳದಲ್ಲೇ ಸಾವನ್ನಪ್ಪಿದರು. ಸ್ಥಳಕ್ಕಾಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ, ಭವಾನಿ ಅವರ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!