Thursday, June 4, 2026
Homeತಾಜಾ ಸುದ್ದಿಮುಲ್ಕಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಚಾಲಕ ಪವಾಡಸದೃಶ ಪಾರು, ಕಾರು ಜಖಂ

ಮುಲ್ಕಿ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ: ಚಾಲಕ ಪವಾಡಸದೃಶ ಪಾರು, ಕಾರು ಜಖಂ

- Advertisement -
- Advertisement -

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್‌ ನಿಲ್ದಾಣದ ಕೆಳ ಬದಿಯ ಆರಾರ್ ಟವರ್ಸ್ ಎದುರು ಭಾಗದ ಹೆದ್ದಾರಿಯಲ್ಲಿ ನಿಲ್ಲಿಸಿದ ಲಾರಿಗೆ ಕಾರು ಡಿಕ್ಕಿಯಾಗಿ ಕಾರಿನ ಚಾಲಕ ಪವಾಡಸದೃಶ ಪಾರಾಗಿದ್ದಾನೆ.

ಮಣಿಪಾಲ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಮುಲ್ಕಿ ಸಮೀಪಿಸುತ್ತಿದ್ದಂತೆ ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಹೆದ್ದಾರಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ತೀವ್ರ ಜಖಂ ಗೊಂಡಿದ್ದು ಕಾರಿನಲ್ಲಿದ್ದ ಚಾಲಕ ಮಂಗಳೂರು ಫಳ್ನೀರ್ ನಿವಾಸಿ ಸಯಾಫ್ ಸಹಿತ ಇನ್ನೋರ್ವ ಪವಾಡಸದೃಶ ಪಾರಾಗಿದ್ದಾರೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!