Friday, June 5, 2026
Homeಕರಾವಳಿಉಡುಪಿಉಡುಪಿ: ಅಡ್ಡಾದಿಡ್ಡಿ ಚಲಾಯಿಸಿ ಇತರೆ ವಾಹನಗಳಿಗೆ ಡಿಕ್ಕಿಯಾದ ಕಾರು

ಉಡುಪಿ: ಅಡ್ಡಾದಿಡ್ಡಿ ಚಲಾಯಿಸಿ ಇತರೆ ವಾಹನಗಳಿಗೆ ಡಿಕ್ಕಿಯಾದ ಕಾರು

- Advertisement -
- Advertisement -

ಡುಪಿ: ಅಡ್ಡಾದಿಡ್ಡಿ ಚಲಾಯಿಸಿ ಇತರೆ ವಾಹನಗಳಿಗೆ ಕಾರು ಡಿಕ್ಕಿಯಾದ ಘಟನೆ ಮಣಿಪಾಲದಲ್ಲಿ ಸೋಮವಾರ ಸಂಜೆ ನಡೆದಿದೆ.ಕಾರು ಪರ್ಕಳ ಕಡೆಯಿಂದ ಮಣಿಪಾಲಕ್ಕೆ ಬರುವಾಗ ಕೆಎಂಸಿ ಆಸ್ಪತ್ರೆ ನಿಲ್ದಾಣ ಸಮೀಪ ಬಸ್‌ಗೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು.

ಆ ಬಳಿಕ ಹಿಂದಕ್ಕೆ ರಿವರ್ಸ್‌ ತೆಗೆಯುವಾಗ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕ್‌ ಸವಾರರಿಗೆ ತರಚಿದ ಗಾಯವಾಗಿದೆ.ಪರ್ಕಳದಿಂದ ಬರುವಾಗಲೆ ಅಡ್ಡಾದಿಡ್ಡಿ ಸಂಚರಿಸಿದ್ದ ಕಾರು ಕೆಲವು ವಾಹನಗಳಿಗೆ ಢಿಕ್ಕಿ ಹೊಡೆಸಿ ಹಾನಿಗೊಳಿಸಿದೆ ಎನ್ನಲಾಗಿದೆ. ಮಣಿಪಾಲದಲ್ಲಿ ಯುಟರ್ನ್ ಮಾಡಿಕೊಂಡು ಪರ್ಕಳ ಕಡೆಗೆ ಪರಾರಿಯಾಗುತ್ತಿದ್ದವರನ್ನು ಪೊಲೀಸರು ಬೆನ್ನಟ್ಟಿದ್ದಾರೆ. ಪರ್ಕಳ ಸಮೀಪ ಕಾರು ನಿಲ್ಲಿಸಿದ ಮೂವರು ಅಪರಿಚಿತರು ಸಮೀಪದ ಕಾಡಿನೊಳಗೆ ನುಗ್ಗಿ ಪರಾರಿಯಾಗಿದ್ದಾರೆ. ಸ್ಥಳೀಯರು, ಪೊಲೀಸರು ಹುಡುಕಾಟ ನಡೆಸಿದರೂ ಪರಿಸರದಲ್ಲಿ ಯಾವುದೆ ಸುಳಿವು ಸಿಕ್ಕಿಲ್ಲ. ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.


ಕಾರನ್ನು ವಶಕ್ಕೆ ತೆಗೆದುಕೊಂಡ ಮಣಿಪಾಲ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಕಾರಿನೊಳಗೆ ಮೂವರು ಇದ್ದರು ಎನ್ನಲಾಗಿದೆ. ಕಾರಿನೊಳಗಿದ್ದವರು ಮದ್ಯ ವ್ಯಸನ ಹಾಗೂ ಗಾಂಜಾ ಸೇವನೆ ಮಾಡಿದ ಶಂಕೆ ವ್ಯಕ್ತವಾಗಿದೆ.

- Advertisement -

Latest News

error: Content is protected !!