- Advertisement -
- Advertisement -
ಸುಳ್ಯ; ಚಾಲಕನ ನಿಯಂತ್ರಣ ತಪ್ಪಿ ದೇವರಕೊಲ್ಲಿಯಲ್ಲಿ ಕಾರು ಅಪಘಾತವಾಗಿದ್ದು ಕಾರು ಪರಿಶೀಲನೆ ವೇಳೆ ಕಾರಿನಲ್ಲಿ ಗಾಂಜಾ ಪತ್ತೆಯಾಗಿದೆ.
ಪಿರಿಯಾಪಟ್ಟಣದಿಂದ ಮಡಿಕೇರಿ ಮಾರ್ಗವಾಗಿ ಪುತ್ತೂರಿಗೆ ತೆರಳುತ್ತಿದ್ದ ಕಾರು ಮಾರ್ಗಮಧ್ಯದ ದೇವರಕೊಲ್ಲಿಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಈ ಸಂದರ್ಭ ನೆರವಿಗೆ ಧಾವಿಸಿ ಬಂದ ಸ್ಥಳೀಯರಿಗೆ ಕಾರಿನಲ್ಲಿ ಗಾಂಜಾ ಪ್ಯಾಕೇಟ್ ಗಳು ಪತ್ತೆಯಾಗಿವೆ. ಕೂಡಲೇ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಕಾರಿನಲ್ಲಿದ್ದ ಪುತ್ತೂರು ನಿವಾಸಿಗಳಾದ ಫಜ್ಲುದ್ದೀನ್, ಮುಷ್ತಾಕ್, ಜಾಬಿರ್ ಎಂಬುವವರನ್ನು ಮತ್ತು ಗಾಂಜಾ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
- Advertisement -