Friday, June 5, 2026
Homeತಾಜಾ ಸುದ್ದಿನವದೆಹಲಿ; ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ  CA ಪರೀಕ್ಷೆಯ ವೇಳಾಪಟ್ಟಿ ಬದಲಾವಣೆ

ನವದೆಹಲಿ; ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ  CA ಪರೀಕ್ಷೆಯ ವೇಳಾಪಟ್ಟಿ ಬದಲಾವಣೆ

- Advertisement -
- Advertisement -

ನವದೆಹಲಿ; ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ  CA ಪರೀಕ್ಷೆಯ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ.ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಗಳನ್ನು ಈ ಹಿಂದೆ ನಿರ್ಧರಿಸಿದಂತೆ ಮೇ ತಿಂಗಳಲ್ಲಿ ನಡೆಯಲಿದೆ.

ಆದರೆ, ಗ್ರೂಪ್ 1 ರ ಮಧ್ಯಂತರ ಕೋರ್ಸ್ ಪರೀಕ್ಷೆಯು ಈ ಮೊದಲು ನಿಗದಿಪಡಿಸಿದ್ದ ಮೇ 3, 5 ಮತ್ತು 7 ದಿನಾಂಕಗಳ ಬದಲಾಗಿ ಮೇ 3, 5 ಮತ್ತು 9 ರಂದು ನಡೆಯಲಿದೆ.ಗ್ರೂಪ್‌ 2 ಪರೀಕ್ಷೆಯು ಮೇ 9, 11 ಮತ್ತು 13ರ ಬದಲಾಗಿ ಮೇ 11, 15 ಮತ್ತು 17ರಂದು ನಡೆಯಲಿದೆ.

ಇನ್ನು ಫೈನಲ್‌ ಪರೀಕ್ಷೆಗಳ ದಿನಾಂಕವೂ ಬದಲಾಗಿದ್ದು, ಗ್ರೂಪ್‌ 1 ಫೈನಲ್‌ ಪರೀಕ್ಷೆಯು ಮೇ 2, 4 ಮತ್ತು 8 ರಂದು ನಡೆಯಲಿದೆ.  ಗ್ರೂಪ್ 2  ಫೈನಲ್‌ ಪರೀಕ್ಷೆಯನ್ನು ಮೇ 10, 14 ಮತ್ತು 16 ರಂದು ನಡೆಸಲಾಗುವುದು ಎಂದು ಹೇಳಿದೆ.

ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ–ಸ್ಥಳೀಯ ಪ್ರಾಧಿಕಾರವು ಸಾರ್ವಜನಿಕ ರಜೆ ಎಂದು ಘೋಷಿಸಿದರೆ, ಈಗ ತಿಳಿಸಲಾದ ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ.

- Advertisement -

Latest News

error: Content is protected !!