Tuesday, April 30, 2024
Homeಕರಾವಳಿಮಂಗಳೂರು ವಿವಿ ಕಾಲೇಜಿನ ಕಾರಂತ ಸಭಾಂಗಣದಲ್ಲಿ ಇಂದು ಬ್ಯಾರಿ ಭಾಷಾ ದಿನಾಚರಣೆ

ಮಂಗಳೂರು ವಿವಿ ಕಾಲೇಜಿನ ಕಾರಂತ ಸಭಾಂಗಣದಲ್ಲಿ ಇಂದು ಬ್ಯಾರಿ ಭಾಷಾ ದಿನಾಚರಣೆ

spot_img
- Advertisement -
- Advertisement -

ಮಂಗಳೂರು: ಬ್ಯಾರಿ ಭಾಷಾ ದಿನಾಚರಣೆ ಹಾಗೂ ಬ್ಯಾರಿ ವಚನಮಾಲೆ ಪುಸ್ತಕ ಬಿಡುಗಡೆ ಸಮಾರಂಭವು ಇಂದು ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಡಾ. ಶಿವರಾಮ ಕಾರಂತ ಭವನದಲ್ಲಿ ನಡೆಯಲಿದೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಆಡಳಿತಾಧಿಕಾರಿ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜು ಬಿ.ಮೂಡ ಬಂಟ್ವಾಳದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಬ್ಯಾರಿ ಭಾಷಾ ದಿನಾಚರಣೆಯ ಉಪನ್ಯಾಸ ನೀಡಲಿದ್ದಾರೆ.

ಲೇಖಕ ಹಾಗೂ ಬಜಾಲ್ ಸ್ನೇಹ ಪಬ್ಲಿಕ್ ಸ್ಕೂಲ್ ಶಿಕ್ಷಕ ಅಶೀರುದ್ದೀನ್ ಆಲಿಯಾ ಬರೆದಿರುವ ಬ್ಯಾರಿ ವಚನಮಾಲೆ ಕೃತಿಯನ್ನು ಸಾಹಿತಿ ಹಾಗೂ ಪತ್ರಕರ್ತ ಹಂಝ ಮಲಾರ್ ಬಿಡುಗಡೆ ಮಾಡಲಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬ್ಯಾರಿ ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಇದರ ಸಹಯೋಗದಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ನಡೆಯಲಿದೆ.

- Advertisement -
spot_img

Latest News

error: Content is protected !!