Friday, June 5, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಸರಕಾರಿ ಬಸ್ಸಿನ ಹಿಂಬದಿ ಎರಡು ಚಕ್ರ ಕಳಚಿ ಅವಘಡ

ಬೆಳ್ತಂಗಡಿ : ಸರಕಾರಿ ಬಸ್ಸಿನ ಹಿಂಬದಿ ಎರಡು ಚಕ್ರ ಕಳಚಿ ಅವಘಡ

- Advertisement -
- Advertisement -

ಬೆಳ್ತಂಗಡಿ : ಚಲಿಸುತ್ತಿದ್ದ ಸರಕಾರಿ ಬಸ್ಸಿನ ಹಿಂಬದಿ ಎರಡು ಚಕ್ರ ಕಳಚಿ ರಸ್ತೆಗೆ ಬಿದ್ದ ಘಟನೆ ಟಿ.ಬಿ.ಕ್ರಾಸ್ ನಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್ ಬಳಿಯ ಕುಂಟಿನಿ‌ ಬಳಿ ಉಜಿರೆಯಿಂದ ಬೆಳ್ತಂಗಡಿ ಕಡೆ ಪ್ರಯಾಣ ಮಾಡುತ್ತಿದ್ದ ಸರಕಾರಿ ಬಸ್ಸಿನ ಹಿಂಬದಿ‌ ಚಕ್ರ ಜ.30 ರಂದು ಬೆಳಗ್ಗೆ ಕಳಚಿ ರಸ್ತೆಗೆ ಬಿದ್ದು ರಸ್ತೆ ಸಂಚಾರ ಬಂದ್ ಅಗಿತ್ತು.

ಬಸ್ಸಿನ ಚಾಲಕ ಮತ್ತು ಕಂಡಕ್ಟರ್ ಸೇರಿ ರಸ್ತೆ ಬದಿಯ ಮಣ್ಣಿನ್ನು ಸೈಡಿಗೆ ಹಾರೆಯಿಂದ ತೆಗೆದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನೆ ವೇಳೆ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎನ್ನಲಾಗಿದೆ.

- Advertisement -

Latest News

error: Content is protected !!