Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಉಜಿರೆ ಪೇಟೆಯಲ್ಲಿ ನಿಲ್ಲಿಸಿ ಹೋಗಿದ್ದ ಬುಲೆಟ್ ಬೈಕ್ ಕಳ್ಳತನ

ಬೆಳ್ತಂಗಡಿ : ಉಜಿರೆ ಪೇಟೆಯಲ್ಲಿ ನಿಲ್ಲಿಸಿ ಹೋಗಿದ್ದ ಬುಲೆಟ್ ಬೈಕ್ ಕಳ್ಳತನ

- Advertisement -
- Advertisement -

ಬೆಳ್ತಂಗಡಿ : ಉಜಿರೆ ಪೇಟೆಯಲ್ಲಿ ನಿಲ್ಲಿಸಿ ಹೋಗಿದ್ದ ಬುಲೆಟ್ ಬೈಕ್ ಅನ್ನು ಕಳ್ಳರು ಕಳ್ಳತನ ಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ನಿವಾಸಿಯಾಗಿರುವ ಸಿವಿಲ್ ಎಂಜಿನಿಯರ್ ಆಗಿರುವ ನವೀನ್ ಸಿ‌.ಕೆ ಎಂಬವರು ಬೈಕ್ ಅನ್ನು ಕಳೆದು ಕೊಂಡವರಾಗಿದ್ದಾರೆ. ಇವರು ಮೇ 31ರಂದು ಮಧ್ಯಾಹ್ನ 12.30ರ ಸುಮಾರಿಗೆ

 ಉಜಿರೆಯ ಎಫ್.ಎಂ.ಲಾಡ್ಜ್ ನ ಸಮೀಪ KA-19-EH-2516 ನಂಬರಿನ ಬುಲೆಟ್ ಬೈಕ್ ಅನ್ನು ನಿಲ್ಲಿಸಿ ಹೋಗಿದ್ದರು. ಕಚೇರಿ ಕೆಲಸ ಮುಗಿಸಿಕೊಂಡು 6 ಗಂಟೆಯ ಸುಮಾರಿಗೆ ಬಂದು ನೋಡಿದಾಗ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿತ್ತು. ಬೈಕಿಗಾಗಿ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಕಳವಾಗಿರುವ ಬೈಕಿನ ಮೌಲ್ಯ ರೂ 1,20,000 ಎಂದು ಅಂದಾಜಿಸಲಾಗಿದ್ದು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.

- Advertisement -

Latest News

error: Content is protected !!