Tuesday, June 25, 2024
Homeತಾಜಾ ಸುದ್ದಿಕಲ್ಲು ಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಅಣ್ಣ-ತಂಗಿಯ ಸಾವು- ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ!…

ಕಲ್ಲು ಕ್ವಾರಿಯ ನೀರಿನ ಹೊಂಡದಲ್ಲಿ ಮುಳುಗಿ ಅಣ್ಣ-ತಂಗಿಯ ಸಾವು- ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ!…

spot_img
- Advertisement -
- Advertisement -

ಯಲಹಂಕ:ಬೆಟ್ಟ ಹಲಸೂರು ಬಳಿಯ ಕಲ್ಲು ಕ್ವಾರಿಯ ನೀರಿನ ಹೊಂಡದಲ್ಲಿ ನಾಯಿಯನ್ನು ಸ್ನಾನ ಮಾಡಿಸಲು ಹೋದ ಅಣ್ಣ-ತಂಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಜೆನಿಫರ್ (17) ಅಣ್ಣ ಪ್ರೇಮಕುಮಾರ್ ( 21) ಎಂದು ಗುರುತಿಸಲಾಗಿದೆ.ಬೆಟ್ಟ ಹಲಸೂರಿನ ನಿವಾಸಿ ಮೃತ ಜೆನಿಫರ್ ಮೃತ ಪ್ರೇಮ್ ಕುಮಾರನ ಚಿಕ್ಕಮ್ಮನ ಮಗಳು ತಮಿಳುನಾಡಿನಿಂದ ಅಣ್ಣನ ಮನೆಗೆ ಬಂದಿದ್ದವೇಳೆ ಈ ಘಟನೆ ವರದಿಯಾಗಿದೆ.

ಫಾರ್ಮ್ ನೋಡಲು ಹೋಗುವಾಗ ಕಲ್ಲು ಕ್ವಾರಿಯ ನೀರಿನ ಹೊಂಡದಲ್ಲಿ ನಾಯಿಗೆ ಸ್ನಾನ ಮಾಡಿಸಲು ಹೋದವೇಳೆ ಜೆನಿಫರ್ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾಳೆ. ಈ ವೇಳೆ ಅಣ್ಣ ಪ್ರೇಮ್ ಕುಮಾರ್ ತಂಗಿಯನ್ನು ರಕ್ಷಿಸಲು ನೀರಿಗೆ ಧುಮುಕ್ಕಿದ್ದಾನೆ.ಈ ವೇಳೆ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

- Advertisement -
spot_img

Latest News

error: Content is protected !!