Tuesday, May 7, 2024
Homeಕ್ರೀಡೆಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ : ಕಂಚಿನ ಪದಕಕ್ಕೆ ಮುತ್ತಿಟ್ಟ ಬಾಕ್ಸರ್...

ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ : ಕಂಚಿನ ಪದಕಕ್ಕೆ ಮುತ್ತಿಟ್ಟ ಬಾಕ್ಸರ್ ಲವ್ಲೀನಾ ಬೊರ್ಗೊಹೈನ್

spot_img
- Advertisement -
- Advertisement -

ಟೋಕಿಯೋ :  ಒಲಿಂಪಿಕ್ಸ್​ನಲ್ಲಿ ಸೆಮಿಫೈನಲ್​ ತಲುಪಿದ್ದ ಮಹಿಳಾ ಬಾಕ್ಸರ್​ ಲವ್ಲೀನಾ ಬೊರ್ಗೊಹೈನ್​ ಕಂಚಿನ ಪದಕವನ್ನು ಗೆದ್ದಿದ್ದಾರೆ.

ಟರ್ಕಿಯ ಬುಸೆನಾಜ್ ಸುರ್ಮೆನೆಲ್ ವಿರುದ್ಧ ಸೆಮಿಫೈನಲ್​ ಪಂದ್ಯದಲ್ಲಿ ಸೆಣೆಸಿದ್ದ ಲವ್ಲೀನಾ 5-0 ಅಂತರದಲ್ಲಿ ಪರಾಭವಗೊಂಡರು. ಟರ್ಕಿಯ ವಿಶ್ವ ಶ್ರೇಯಾಂಕಿತೆ ವಿರುದ್ಧ ಹೋರಾಡಿ ಸೋಲನ್ನು ಅನುಭವಿಸಿದ್ದರೂ ಸಹ ಲವ್ಲಿನಾ ದೇಶಕ್ಕೆ ಕಂಚಿನ ಪದಕ ಒದಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವಾರ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಜಯ ಸಾಧಿಸಿ ಸೆಮಿ ಫೈನಲ್​ಗೆ ಎಂಟ್ರಿ ಕೊಡುವ ಮೂಲಕ ಒಲಿಂಪಿಕ್​​ ಬಾಕ್ಸಿಂಗ್​ ವಿಭಾಗದಲ್ಲಿ ದೇಶಕ್ಕೆ ಮೂರನೇ ಪದಕ ತಂದುಕೊಡುತ್ತಿರುವ ಆಟಗಾರ್ತಿ ಎನಿಸಿದ್ದರು. ಇಲ್ಲಿಯವರೆಗೆ ಈ ವಿಭಾಗದಲ್ಲಿ ಮೇರಿಕೋಮ್​ ಹಾಗೂ ವಿಜಯೇಂದರ್​ ಸಿಂಗ್​ ಮಾತ್ರ ದೇಶಕ್ಕೆ ಪದಕ ತಂದುಕೊಟ್ಟವರಾಗಿದ್ದಾರೆ.

- Advertisement -
spot_img

Latest News

error: Content is protected !!