ನವದೆಹಲಿ; ದಕ್ಷಿಣಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತನ್ನ ತಂದೆ ಹಾಗೂ ತಾಯಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಾರೆ.
ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಅವರ ಕಚೇರಿಯಲ್ಲಿ ನನ್ನ ಹೆತ್ತವರೊಂದಿಗೆ ಭೇಟಿಯಾದ ಅಪೂರ್ವ ಸಂದರ್ಭ ಎಂದು ಕ್ಯಾಪ್ಶನ್ ಕೊಟ್ಟಿರುವ ಅವರು ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಮತ್ತು ಪಾರ್ಟಿಯ ಸಾಮಾನ್ಯ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿ ಇಂದು ವಿಶ್ವ ನಾಯಕನ ಜೊತೆ ನಿಲ್ಲುವ ಅವಕಾಶ ಸಿಕ್ಕಿದ್ದು ನನ್ನ ಪಾಲಿಗೆ ಅಮೂಲ್ಯವಾದದ್ದು ಮತ್ತು ಇದನ್ನು ವರ್ಣಿಸಲು ಪದಗಳು ಸಾಲದು ಎಂದಿದ್ದಾರೆ.
ರಾಜಕೀಯದಲ್ಲಿ ತೊಡಗಿಸುವ ಕನಸನ್ನು ನೆಟ್ಟು ಅದನ್ನು ನನಸಾಗಿಸುವ ಭರವಸೆ ನೀಡಿದ ನಾಯಕರು ಮೋದಿ ಜೀ ಆದ ಕಾರಣ ಈ ಕ್ಷಣ ನನಗೆ ಮತ್ತಷ್ಟು ಹತ್ತಿರವಾಗಿದೆ. ನಮ್ಮ ತುಳುನಾಡಿನ ಸಂಸ್ಕೃತಿಯ ಸಂಕೇತವಾದ ‘ಪಿಲಿ ತ ಮಂಡೆ’ ಅವರಿಗೆ ನೀಡಲಾಯಿತು.. ಮೋದಿ ಜೀ ಅವರು ತಮ್ಮ ಮನ್ ಕಿ ಬಾತ್‌ನಲ್ಲಿಯೂ ಈ ವಿಷಯವನ್ನು ಉಲ್ಲೇಖಿಸಿದ್ದರು ಎಂಬುವುದು ವಿಶೇಷ ಎಂದು ಬರೆದುಕೊಂಡಿದ್ದಾರೆ.