Sunday, June 7, 2026
Homeತಾಜಾ ಸುದ್ದಿಮದುವೆ ಮೆರವಣಿಗೆ ವೇಳೆ ಕುಡಿದು ಮೈಮರೆತ ವರ: ತಡವಾಯ್ತು ಅಂತಾ ಇನ್ನೊಬ್ಬನನ್ನು ಮದುವೆಯಾದ ಮದುಮಗಳು

ಮದುವೆ ಮೆರವಣಿಗೆ ವೇಳೆ ಕುಡಿದು ಮೈಮರೆತ ವರ: ತಡವಾಯ್ತು ಅಂತಾ ಇನ್ನೊಬ್ಬನನ್ನು ಮದುವೆಯಾದ ಮದುಮಗಳು

- Advertisement -
- Advertisement -

ರಾಜಸ್ಥಾನ: ಮದುವೆ ಮೆರವಣಿಗೆ ವೇಳೆ ವರ ಕುಡಿದು ಮೈಮರೆತ ಕಾರಣ ಮೆರವಣಿಗೆ ಮದುವೆ ಹಾಲ್ ತಲುಪೋದು ತಡವಾಯ್ತು ಅಂತಾ ವಧುವೊಬ್ಬಳು ಇನ್ನೊಬ್ಬನನ್ನು ವಿವಾಹವಾದ ಘಟನೆ ರಾಜಸ್ಥಾನದ ರಾಜ್‌ಗಢ ತಹಸಿಲ್‌ನ ಚೇಲಾನಾ ಗ್ರಾಮದಲ್ಲಿ ನಡೆದಿದೆ.

ವಧು ತನ್ನ ವರನ ಕುಡಿತದ ನೃತ್ಯದಿಂದ ಬಾರಾತ್​ಗೆ (ಮದುವೆ ಮೆರವಣಿಗೆ) ತಡವಾಗಿದ್ದರಿಂದ ಕೋಪಗೊಂಡು ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಮೇ 15ರ ಭಾನುವಾರದಂದು ವರ ಸುನೀಲ್ ಮತ್ತು ಆತನ ಸಂಬಂಧಿಕರು ವಧುವಿನ ಗ್ರಾಮಕ್ಕೆ ಆಗಮಿಸಿದ್ದರು. ರಾತ್ರಿ 9 ಗಂಟೆಗೆ ವಧುವಿನ ಮನೆಗೆ ಬಾರಾತ್ ಹೊರಟಿತು. ಆದರೆ ವರ ಮತ್ತು ಅವನ ಸ್ನೇಹಿತರು ಕುಡಿದು ಡಿಜೆ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಮುಂದುವರೆಸಿದರು. ಇದರಿಂದಾಗಿ ಮೆರವಣಿಗೆ ಸಾಗಲು ಬಹಳ ತಡವಾಯಿತು. ಮುಹೂರ್ತ ಸಮೀಪಿಸಿದರೂ ಮದುಮಗ ಮಂಟಪಕ್ಕೆ ಬರಲೇ ಇಲ್ಲ. ಕುಡಿದು ಕುಣಿದಾಡುತ್ತಿದ್ದ ವರನನ್ನು ನೋಡಿ ಅಸಮಾಧಾನಗೊಂಡ ವಧು ಆತನನ್ನು ಮದುವೆಯಾಗಲು ನಿರಾಕರಿಸಿದಳು.

ಮದುಮಗಳು ವರನನ್ನು ಮದುವೆಯಾಗಲು ಒಪ್ಪದ ಹಿನ್ನೆಲೆಯಲ್ಲಿ ಆಕೆಯ ಮನೆಯವರು ಆಕೆಯನ್ನು ಬೇರೆಯವರಿಗೆ ಕೊಟ್ಟು ಮದುವೆ ಮಾಡಲು ನಿರ್ಧರಿಸಿದ್ದರು. ಈ ಘಟನೆಯ ಒಂದು ದಿನದ ಬಳಿಕ ವರನ ಕುಟುಂಬ ವಧುವಿನ ಕುಟುಂಬದ ವಿರುದ್ಧ ದೂರು ನೀಡಲು ರಾಜ್‌ಗಢ ಪೊಲೀಸ್ ಠಾಣೆಗೆ ತೆರಳಿದೆ. ವಧುವಿನ ಕಡೆಯವರು ವರ ಮತ್ತು ಅವರ ಕುಟುಂಬದವರು ಮದುವೆಯ ಮೆರವಣಿಗೆ ಬಗ್ಗೆ ಅಸಡ್ಡೆ ಹೊಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ಇದು ಕೌಟುಂಬಿಕ ಸಮಸ್ಯೆಯಾದ್ದರಿಂದ ಅವರವರೇ ಬಗೆಹರಿಸಿಕೊಳ್ಳಬೇಕೆಂದು ಪೊಲೀಸರು ಸಲಹೆ ನೀಡಿ ಕಳುಹಿಸಿದ್ದಾರೆ.

- Advertisement -

Latest News

error: Content is protected !!