Saturday, June 6, 2026
Homeಕರಾವಳಿಗಂಟಲಲ್ಲಿ ಪರೋಟ ಸಿಕ್ಕಿ ಹಾಕಿಕೊಂಡು ಬಾಲಕ ಸಾವು

ಗಂಟಲಲ್ಲಿ ಪರೋಟ ಸಿಕ್ಕಿ ಹಾಕಿಕೊಂಡು ಬಾಲಕ ಸಾವು

- Advertisement -
- Advertisement -

ಕೇರಳ: ಪರೋಟ ತಿನ್ನುವಾಗ ಗಂಟಲಲ್ಲಿ‌ ಸಿಲುಕಿಕೊಂಡು ಬಾಲಕ ಸಾವನ್ನಪ್ಪಿರುವ ಘಟನೆ ಕೇರಳದ ಇಡುಕ್ಕಿ ನೆಡುಮಕಂದಂ ಎಂಬಲ್ಲಿ ನಡೆದಿದೆ. ಪರತೋಡು ಕಾಲೋನಿಯ ಸಂತೋಷ್ ಕಾರ್ತಿಕ್(9) ಮೃತ ಬಾಲಕ.

ನಿನ್ನೆ ರಾತ್ರಿ ಪರೋಟಾ ತಿಂದ ಬಳಿಕ ಬಾಲಕ ಉಸಿರಾಟದ ತೊಂದರೆಯ ಬಗ್ಗೆ ಮನೆಯವರಿಗೆ ತಿಳಿಸಿದ್ದಾನೆ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಹುಡುಗ ತುಂಬಾ ಅಸ್ವಸ್ಥನಾಗಿರುವುದನ್ನು ಗಮನಿಸಿದ ವೈದ್ಯರು ಕೂಡಲೇ ಚಿಕಿತ್ಸೆ ನೀಡಿದ್ದಾರೆ. ಆದರೆ ಕೆಲವೇ ಕ್ಷಣದಲ್ಲಿ ಆತ ಮೃತಪಟ್ಟಿದ್ದಾನೆ.

ಇನ್ನು ಬಾಲಕ ಕಳೆದ ಒಂದು ವರ್ಷದಿಂದ ಮೂರ್ಛೆರೋಗಕ್ಕೆ ಕೂಡ ತುತ್ತಾಗಿದ್ದ ಎನ್ನಲಾಗಿದೆ.

- Advertisement -

Latest News

error: Content is protected !!