Thursday, June 4, 2026
Homeಕರಾವಳಿಮನೆ ಬಿಟ್ಟು ಬರೋದಕ್ಕೆ ಒಪ್ಪದ ಪ್ರೇಯಸಿ: ಬೆಳ್ತಂಗಡಿಯಲ್ಲಿ ಯುವತಿಗೆ ಚೂರಿ ಇರಿದ ಯುವಕ

ಮನೆ ಬಿಟ್ಟು ಬರೋದಕ್ಕೆ ಒಪ್ಪದ ಪ್ರೇಯಸಿ: ಬೆಳ್ತಂಗಡಿಯಲ್ಲಿ ಯುವತಿಗೆ ಚೂರಿ ಇರಿದ ಯುವಕ

- Advertisement -
- Advertisement -

ಬೆಳ್ತಂಗಡಿ: ಪ್ರೀತಿಸಿದ ಹುಡುಗಿ ಮನೆ ಬಿಟ್ಟು ಬರೋದಕ್ಕೆ ಒಪ್ಪದ ಕಾರಣ ಆಕೆ ಪ್ರಿಯಕರ ಚೂರಿಯಿಂದ ಇರಿದ ಘಟನೆ ಬೆಳ್ತಂಗಡಿಯ ಲಾಯಿಲ ಸಮೀಪ ನಡೆದಿದೆ.

ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮದ ನಿವಾಸಿ 21 ವರ್ಷದ ಯುವತಿ ಇರಿತಕ್ಕೆ ಒಳಗಾದವರು.  ಪೂಂಜಾಲಕಟ್ಟೆ ನಿವಾಸಿ ಶಮೀರ್‌ (22) ಚೂರಿ ಇರಿದ ಯುವಕ.

ಶಮೀರ್‌ ಹಾಗೂ ಯುವತಿಯನ್ನು ಸುಮಾರು 5 ವರ್ಷಗಳಿಂದ ಪ್ರೀತಿಸುತ್ತಿದ್ದರು. ಶಮೀರ್ ಯುವತಿಯನ್ನು ಮದುವೆಯಾಗಲು ಮನೆ ಬಿಟ್ಟು ಬರಲು ಒತ್ತಾಯಿಸುತ್ತಿದ್ದ. ಅದನ್ನು ಆಕೆ ತಿರಸ್ಕರಿಸಿದ್ದರಿಂದ ಕೋಪಗೊಂಡ ಪ್ರೇಮಿ ಮಂಗಳವಾರ ರಾತ್ರಿ 10.20ಕ್ಕೆ ಯುವತಿ ಮನೆಗೆ ನುಗ್ಗಿ ಆಕೆಗೆ ಚೂರಿಯಿಂದ ಇರಿದಿದ್ದಾನೆ. ಎಡ ಕೈ, ಬಲ ಕೈಗೆ ಮತ್ತು ಕುತ್ತಿಗೆಗೆ ಗಾಯವಾಗಿದೆ. ತಕ್ಷಣ ಮನೆಮಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಯುವತಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಕಲಂ: 448, 324, 354, 504, 506, ಐ.ಪಿ.ಸಿ.ಯಡಿ ಪ್ರಕರಣ ದಾಖಲಿಸಲಾಗಿದೆ.

- Advertisement -

Latest News

error: Content is protected !!